facebook pixel
chevron_right Health
transparent
ಉದರ ಸಂಬಂಧಿ ಸಮಸ್ಯೆಗಳಿಗೆ ರಾಮಬಾಣ ಬೇರು ಹಲಸು
ಬೇರುಹಲಸಿನ ಬಗೆಗೆ ಅನೇಕ ವಿಷಯಗಳನ್ನು ಹಿಂದಿನ ಅಂಕಣದಲ್ಲಿ ತಿಳಿದುಕೊಂಡಿದ್ದೇವೆ. ಅಥ್ಲೆಟಿಕ್ಸ್ ಹಾಗೂ ಜಿಮ್ ಮಾಡುವ ವ್ಯಕ್ತಿಗಳಿಗೆ ಇದರ ಸೇವನೆ ಒಳ್ಳೆಯದು. ಉತ್ತಮ ಪ್ರಮಾಣದಲ್ಲಿ ನಾರಿನಾಂಶ ಹೊಂದಿರುವುದರಿಂದ ಅನೇಕ ಉದರ ಸಂಬಂಧಿತ ಸಮಸ್ಯೆಗಳನ್ನು ಹತೋಟಿ ಮಾಡಬಲ್ಲದು. ಹೊಟ್ಟೆಯಲ್ಲಿ ಉರಿ, ಆಸಿಡಿಟಿ, ಅಲ್ಸರ್, ಕರುಳಿನಿಂದ ವಿಷವಸ್ತುಗಳನ್ನು ಹೊರಹಾಕಲು ಸಹಾಯ ಮಾಡುತ್ತದೆ. ಕೊಲೊನ್ ಕ್ಯಾನ್ಸರ್​ನಿಂದ ದೂರವಿಡಲೂ ಸಹ ಇದು ಸಹಕಾರಿ. ಇದರ ಸೇವನೆ ಬೇಗನೇ ಸಂತೃಪ್ತ ಭಾವನೆಯನ್ನು ಮೂಡಿಸುತ್ತದೆ. ತನ್ಮೂಲಕ ಕಡಿಮೆ ತಿನ್ನಲು ಸಾಧ್ಯವಾಗುತ್ತದೆ, ಇದರಿಂದ ಪರೋಕ್ಷವಾಗಿ ಕೊಲೆಸ್ಟ್ರಾಲ್ ಕಡಿಮೆ ಆಗುತ್ತದೆ. ದೇಹದಲ್ಲಿ ಸಕ್ಕರೆ ಅಂಶವನ್ನು ನಿಯಂತ್ರಿಸುತ್ತದೆ. ಇದರಲ್ಲಿನ ಮ್ಯಾಂಗನೀಸ್ ಹೆಚ್ಚು ಸಹಕಾರಿಯಾಗಿದ್ದು, ದೇಹದಲ್ಲಿ ಗ್ಲುಕೋಸ್ ಪ್ರಮಾಣಕಾಯ್ದುಕೊಳ್ಳಲು ಪರಿಣಾಮಕಾರಿ ಎನಿಸಿದೆ. ಇದು ಒಮೆಗಾ-3ಯನ್ನು ಸಹ ಹೊಂದಿದೆ ಎಂಬುದಾಗಿ ಒಂದು ಅಧ್ಯಯನ ಹೇಳುತ್ತದೆ. ಹಲ್ಲಿನ ಆರೋಗ್ಯಕ್ಕೂ ಬೇರುಹಲಸು ಒಳ್ಳೆಯದು.
For the best experience use Awesummly app on your Android phone
Awesummly Chrome Extension Awesummly Android App