facebook pixel
chevron_right Top
transparent
ಸಾಮಾಜಿಕ ಪೂರ್ವಾಗ್ರಹ ಮೀರಿ ಯಶಸ್ಸು ಕಾಣುತ್ತಿರುವ ಬ್ರಾಹ್ಮಣೇತರ ಅರ್ಚಕಿಯರು
ರಾಯ್‌ಗಢದ ಮೊಹೊಪಾಡ ಗ್ರಾಮದ ಸುತ್ತಮುತ್ತ ಈಗ 150 ಬ್ರಾಹ್ಮಣೇತರ ಅರ್ಚಕಿಯರಿದ್ದು ಮುಂಬಯಿ, ಥಾಣೆ, ನವಿ ಮುಂಬಯಿಗಳಲ್ಲಿ ಅವರಿಗೆ ಭಾರಿ ಬೇಡಿಕೆಯಿದೆ. ಹುಟ್ಟು, ಸಾವು, ಮದುವೆ, ಗಣೇಶೋತ್ಸವ ಸೇರಿದಂತೆ ಎಲ್ಲ ಕಾರ್ಯಕ್ರಮಗಳಲ್ಲಿ ಧಾರ್ಮಿಕ ವಿಧಿ ವಿಧಾನಗಳನ್ನು ಈ ಅರ್ಚಕಿಯರು ನೆರವೇರಿಸುತ್ತಾರೆ. ಇಂಥದ್ದೊಂದು ಕ್ರಾಂತಿಕಾರಕ ಬೆಳವಣಿಗೆಗೆ ಕಾರಣ ಅಲಿಬಾಗ್‌ನ 101 ವರ್ಷದ ರಾಮೇಶ್ವರ್‌ ಕರ್ವೆ ಅವರ 18 ವರ್ಷಗಳ ನಿರಂತರ ಹೋರಾಟ. ಸ್ವಲ್ಪ ಶಿಕ್ಷಣ ಪಡೆದಿದ್ದ ಮಹಿಳೆಯರು ಅರ್ಚಕ ವೃತ್ತಿಯ ತರಬೇತಿ ಪಡೆಯುವಂತೆ ಮಾಡಿ ಪದವಿಗೆ ಸರಿ ಸಮಾನವಾದ ಪ್ರಮಾಣ ಪತ್ರ ಕೂಡ ಸಿಕ್ಕಿದೆ. ಆರಂಭದಲ್ಲಿ ಈ ಅರ್ಚಕಿಯರು ತಮ್ಮ ಮನೆಗಳಲ್ಲಿ ಗಣೇಶೋತ್ಸವ ಪೂಜೆ ನೆರವೇರಿಸುತ್ತಿದ್ದರು. ಮೊದಲಿಗೆ ಸಾರ್ವಜನಿಕರು ಈ ಮಹಿಳಾ ಅರ್ಚಕಿಯರನ್ನು ವಿರೋಧಿಸಿ ಸ್ವೀಕರಿಸಲು ಹಿಂಜರಿದರೂ ಬಳಿಕ ಗಣೇಶೋತ್ಸವ ಸೇರಿದಂತೆ ನಾನಾ ಪೂಜೆಗಳನ್ನು ನೆರವೇರಿಸಲು ಆಹ್ವಾನಿಸಲಾರಂಭಿಸಿದರು.
For the best experience use Awesummly app on your Android phone
Awesummly Chrome Extension Awesummly Android App