facebook pixel
chevron_right Top
transparent
ಅಂತರ್ಜಾತಿ ವಿವಾಹ: ಗರ್ಭಿಣಿ ಎದುರೇ ಪತಿಯ ಬರ್ಬರ ಹತ್ಯೆ
ಅಂತರ್ಜಾತಿ ವಿವಾಹವಾದ ಕಾರಣ ಯುವಕನನ್ನು ಮರ್ಯಾದಾ ಹತ್ಯೆ ಮಾಡಿರುವುದನ್ನು ಖಂಡಿಸಿ ತೆಲಂಗಾಣದ ನಲಗೊಂಡದಲ್ಲಿ ಜನರು ಪ್ರತಿಭಟನೆ ನಡೆಸುತ್ತಿದ್ದಾರೆ. ನಲಗೊಂಡದಲ್ಲಿ 23 ವರ್ಷದ ಯುವಕ ಪ್ರಣಯ್​ ಕುಮಾರ್​ ಹಾಗೂ ಪತ್ನಿ ಅಮೃತ ವರ್ಷಿಣಿ (21) ಆಸ್ಪತ್ರೆಯಿಂದ ತೆರಳುತ್ತಿದ್ದಾಗ ಹಿಂಭಾಗದಿಂದ ಬಂದ ವ್ಯಕ್ತಿಯೊಬ್ಬ ಪ್ರಣಯ್​ ಮೇಲೆ ಹಲ್ಲೆ ಮಾಡಿ ಕೊಲೆ ಮಾಡಿದ್ದ. ಈ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿದೆ. ವಿಡಿಯೋ ವೈರಲ್​ ಆಗುತ್ತಿದ್ದಂತೆ ಹತ್ಯೆಯನ್ನು ಖಂಡಿಸಿ ಆಸ್ಪತ್ರೆ ಎದುರು ಜನರು ಪ್ರತಿಭಟನೆ ನಡೆಸಲಾಗುತ್ತಿದೆ. ಪತಿಯನ್ನು ಕೊಲೆ ಮಾಡುತ್ತಿದ್ದನ್ನು ನೋಡಿದ 5 ತಿಂಗಳ ಗರ್ಭಿಣಿ ಅಮೃತ ಘಟನಾ ಸ್ಥಳದಲ್ಲೇ ಪ್ರಜ್ಞತಪ್ಪಿ ಬಿದ್ದಿದ್ದರು. ನನ್ನ ಪತಿ ಬೇರೆ ಜಾತಿಯವರಾಗಿದ್ದರಿಂದ ನನ್ನ ತಂದೆ ಮತ್ತು ಅಂಕಲ್ ಈ ಮದುವೆಯನ್ನು ವಿರೋಧಿಸಿದ್ದರು. ಹಾಗೇ ನನಗೆ ಗರ್ಭಪಾತ ಮಾಡಿಸಿಕೊಳ್ಳುವಂತೆ ಸೂಚಿಸಿದ್ದರು.
For the best experience use Awesummly app on your Android phone
Awesummly Chrome Extension Awesummly Android App