facebook pixel
chevron_right Top
transparent
ರೇಪ್‌ಗೆ ನಿರುದ್ಯೋಗ ಕಾರಣವೆಂದ ಶಾಸಕಿ
ಹರಿಯಾಣದಲ್ಲಿ ನಡೆದ ಸಿಬಿಎಸ್‌ಸಿ ಟಾಪರ್‌ ವಿದ್ಯಾರ್ಥಿನಿ ಮೇಲಿನ ಅತ್ಯಾಚಾರ ಆರೋಪಿಗಳಲ್ಲಿ ಒಬ್ಬಾತ ರಾಜಸ್ಥಾನದಲ್ಲಿ ಕಾರ್ಯನಿರ್ವಹಿಸುತ್ತಿರುವ ಯೋಧ ಎಂದು ತಿಳಿದುಬಂದಿದೆ. ಈ ಕುರಿತು ಶನಿವಾರ ಮಾಹಿತಿ ನೀಡಿರುವ ಹರಿಯಾಣ ಪೊಲೀಸ್‌ ಮಹಾನಿರ್ದೇಶಕ ಬಿ.ಎಸ್‌.ಸಂಧು, ಆರೋಪಿಯನ್ನು ಬಂಧಿಸಲು ರಾಜಸ್ಥಾನಕ್ಕೆ ಪೊಲೀಸ್‌ ತಂಡ ಕಳುಹಿಸಲಾಗಿದೆ. ಇನ್ನಿಬ್ಬರ ಪತ್ತೆಗೂ ಕ್ರಮ ಕೈಗೊಳ್ಳಲಾಗಿದೆ. ತನಿಖೆಗಾಗಿ ವಿಶೇಷ ತನಿಖಾ ತಂಡವನ್ನು ರಚಿಸಲಾಗಿದೆ ಎಂದು ಹೇಳಿದ್ದಾರೆ. ಮಹೇಂದ್ರಗಢ ಜಿಲ್ಲೆಯ ಕೈನಾನಾದಲ್ಲಿ ಬುಧವಾರ ರಾತ್ರಿ ಬಸ್‌ ಕಾಯುತ್ತಿದ್ದ 19 ವರ್ಷದ ಯುವತಿಯನ್ನು ಕಾರಿನಲ್ಲಿ ಅಪಹರಿಸಿ ಅತ್ಯಾಚಾರ ಮಾಡಿದ್ದ ಆರೋಪಿಗಳು ಬಸ್‌ ನಿಲ್ದಾಣದಲ್ಲಿ ಎಸೆದುಹೋಗಿದ್ದರು. ಆದರೆ, ತಮ್ಮ ಮಗಳ ಮೇಲೆ ಮೂವರಲ್ಲ, 8-10 ಜನ ಅತ್ಯಾಚಾರ ಎಸಗಿದ್ದಾರೆ ಎಂದು ಸಂತ್ರಸ್ತೆಯ ತಂದೆ ಆರೋಪಿಸಿದ್ದಾರೆ. ಮಗಳು ಆಘಾತದಿಂದ ಬಳಲುತ್ತಿದ್ದರೆ, ಆರೋಪಿಗಳು ಮಾತ್ರ ರಾಜಾರೋಷವಾಗಿ ತಿರುಗುತ್ತಿದ್ದಾರೆ ಎಂದು ಆಕೆಯ ತಾಯಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
For the best experience use Awesummly app on your Android phone
Awesummly Chrome Extension Awesummly Android App