facebook pixel
chevron_right Top
transparent
1.5 ಲಕ್ಷ ಕೋಟಿ ರೂ. ಎನ್‌ಪಿಎ ವಸೂಲಿಗೆ ಯತ್ನ
ವಸೂಲಾಗದ ಸಾಲಗಳ(ಎನ್‌ಪಿಎ) ವಸೂಲಿಗೆ ಸರಕಾರಿ ಸ್ವಾಮ್ಯದ ಬ್ಯಾಂಕ್‌ಗಳು ತೀವ್ರ ಪ್ರಯತ್ನ ನಡೆಸಿವೆ. 2017-18ರಲ್ಲಿ ಈ ಬ್ಯಾಂಕ್‌ಗಳು 74,000 ಕೋಟಿ ರೂ. ಪ್ರಸಕ್ತ ಹಣಕಾಸು ವರ್ಷದಲ್ಲಿ ಸರಕಾರವು ಈ ಗುರಿಯನ್ನು ದ್ವಿಗುಣಗೊಳಿಸಲು ನಿರ್ಧರಿಸಿದೆ. ಅಂದರೆ, 2019ರ ಹಣಕಾಸು ವರ್ಷದ ಅಂತ್ಯದ ಹೊತ್ತಿಗೆ 1.5 ಲಕ್ಷ ಕೋಟಿ ರೂ. ಎನ್‌ಪಿಎ ವಸೂಲಿ ಮಾಡಬೇಕಾದ ಒತ್ತಡ ಬ್ಯಾಂಕ್‌ಗಳ ಮೇಲೆ ಬೀಳಲಿದೆ. ಪ್ರಸಕ್ತ ಹಣಕಾಸು ವರ್ಷದ ಎರಡನೇ ಅವಧಿಯಲ್ಲಿ ಹೆಚ್ಚಿನ ಎನ್‌ಪಿಎ ವಸೂಲಿಗೆ ಬ್ಯಾಂಕ್‌ಗಳು ಪ್ರಯತ್ನಿಸಬೇಕು. ಕಳೆದ ವರ್ಷದ ಎನ್‌ಪಿಎ ಗುರಿಯನ್ನು ಮೀರಿ, ದುಪ್ಪಟ್ಟು ಸಾಧನೆಯನ್ನು ಮಾಡಬೇಕು ಎಂದು ಸರಕಾರ ಹೇಳಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ. ಸರಕಾರಿ ಸ್ವಾಮ್ಯದ ಬ್ಯಾಂಕ್‌ಗಳು ಎನ್‌ಪಿಎ ಹೊರೆಯಿಂದ ಬಳಲಿವೆ. ಇವುಗಳಲ್ಲಿ ಅರ್ಧದಷ್ಟು ಬ್ಯಾಂಕ್‌ಗಳನ್ನಾದರೂ ಎನ್‌ಪಿಎ ಹೊರೆಯಿಂದ ಹೊರ ತರಲು ಸರಕಾರ ಯತ್ನಿಸುತ್ತಿದೆ. ಎನ್‌ಪಿಎ ನಿರ್ವಹಣೆಗಾಗಿ ನಾನಾ ತಂತ್ರಗಳನ್ನು ಅನುಸರಿಸಲಾಗುತ್ತಿದೆ.
For the best experience use Awesummly app on your Android phone
Awesummly Chrome Extension Awesummly Android App