facebook pixel
chevron_right Top
transparent
ವಿಮಾನದಲ್ಲಿ ಸೊಳ್ಳೆ ಕಾಟ: 1.35 ಲಕ್ಷ ವಸೂಲಿ ಮಾಡಿದ ವಕೀಲರು
ಇಂಡಿಗೊ ವಿಮಾನದಲ್ಲಿ ಸೊಳ್ಳೆ ಕಾಟದ ಬಗ್ಗೆ ದೂರಿದ ಪಂಜಾಬ್‌ ಮೂಲದ ಮೂವರು ವಕೀಲರಿಗೆ ವಿಮಾನಯಾನ ಸಂಸ್ಥೆಯು ತಲಾ 40,000 ರೂ. ಪರಿಹಾರ ನೀಡುವಂತೆ ಅಮೃತಸರದ ಗ್ರಾಹಕ ನ್ಯಾಯಾಲಯ ಆದೇಶಿಸಿದೆ. ವಕೀಲರು ಕಳೆದ ಏಪ್ರಿಲ್‌ನಲ್ಲಿ ದಿಲ್ಲಿಯಿಂದ ಅಮೃತಸರಕ್ಕೆ ವಿಮಾನದಲ್ಲಿ ಪ್ರಯಾಣಿಸಿದ್ದರು. ವಿಮಾನದಲ್ಲಿ ಸೊಳ್ಳೆಗಳ ಬಗ್ಗೆ ಸಿಬ್ಬಂದಿಗೆ ದೂರು ನೀಡಿದ್ದರು. ಆದರೆ, ಅವರು ಈ ಬಗ್ಗೆ ನಿರ್ಲಕ್ಷ್ಯ ವಹಿಸಿದ್ದರು. ವಿಮಾನ ನಿಲ್ದಾಣ ಪ್ರಾಧಿಕಾರಕ್ಕೆ ದೂರು ನೀಡಿದರೂ ಅವರು ಪ್ರಯೋಜನವಾಗಿರಲಿಲ್ಲ. ಇದರಿಂದ ಬೇಸತ್ತ ಮೂವರು ವಕೀಲರು ಅಮೃತಸರದ ಗ್ರಾಹಕ ನ್ಯಾಯಾಲಯಕ್ಕೆ ದೂರು ಸಲ್ಲಿಸಿದ್ದರು.
For the best experience use Awesummly app on your Android phone
Awesummly Chrome Extension Awesummly Android App