facebook pixel
chevron_right Top
transparent
ಎಣ್ಣೆ ಲಾರಿ ಅಪಘಾತ: ಅಡುಗೆ ಎಣ್ಣೆಗಾಗಿ ಮುಗಿಬಿದ್ದ ಜನ
ಅಡುಗೆ ಎಣ್ಣೆ ಹೊತ್ತೊಯ್ಯುತ್ತಿದ್ದ ಲಾರಿಯೊಂದು ಕಂಟೇನರ್​ ಲಾರಿಗೆ ಡಿಕ್ಕಿಯಾಗಿದ್ದು, ಲಾರಿಯಲ್ಲಿದ್ದ ಎಣ್ಣೆ ಸೋರುತ್ತಿದ್ದು, ಎಣ್ಣೆಯನ್ನು ಸಂಗ್ರಹಿಸಲು ಸುತ್ತಮುತ್ತಲ ಗ್ರಾಮಗಳ ಜನರು ಮುಗಿಬಿದ್ದಿದ್ದಾರೆ. ಜಿಲ್ಲೆಯ ಇಳಕಲ್​-ಹುನಗುಂದ ರಾಷ್ಟ್ರೀಯ ಹೆದ್ದಾರಿ 50ರಲ್ಲಿ ಭಾನುವಾರ ಬೆಳಗ್ಗೆ ಘಟನೆ ನಡೆದಿದೆ. ಅಪಘಾತ ನಡೆದ ತಕ್ಷಣ ಅಡುಗೆ ಎಣ್ಣೆ ಸೋರಿಕೆಯಾಗುತ್ತಿರುವ ಸುದ್ದಿ ತಿಳಿದ ಜನರು ಕೊಡ, ಬಕೆಟ್​, ಕ್ಯಾನ್​, ಚೊಂಬು ತಂದು ಎಣ್ಣೆಯನ್ನು ಸಂಗ್ರಹಿಸಲು ಪೈಪೋಟಿ ನಡೆಸುತ್ತಿದ್ದಾರೆ. ಲಾರಿಗಳ ನಡುವೆ ಸಿಲುಕಿಕೊಂಡಿದ್ದ ಚಾಲಕನೆಡೆಗೆ ಜನರು ಗಮನ ಕೊಡದೆ ತಮ್ಮ ಪಾಡಿಗೆ ಅಡುಗೆ ಎಣ್ಣೆ ಸಂಗ್ರಹಿಸುತ್ತಿದ್ದಾರೆ. ಸ್ಕಿಡ್​ ಆದ ಕಾರು, ಬೈಕ್​ಗಳು ಅಪಘಾತದಿಂದ ಅಪಾರ ಪ್ರಮಾಣದ ಅಡುಗೆ ಎಣ್ಣೆ ರಸ್ತೆಗೆ ಚೆಲ್ಲಿದ್ದರಿಂದ ನಿಯಂತ್ರಣ ಕಳೆದುಕೊಂಡ ಸುಮಾರು 7 ಬೈಕ್​ಗಳು ಸ್ಕಿಡ್​ ಆಗಿದ್ದು, ಬೈಕ್​ ಸವಾರರಿಗೆ ಸಣ್ಣಪುಟ್ಟ ಗಾಯಗಳಾಗಿವೆ.
For the best experience use Awesummly app on your Android phone
Awesummly Chrome Extension Awesummly Android App