facebook pixel
chevron_right Sports
transparent
ಸ್ಯಾಫ್ ಕಪ್; ಭಾರತ ರನ್ನರ್ ಅಪ್
ಪ್ರತಿಷ್ಠಿತ ಸ್ಯಾಫ್‌ ಫುಟ್ಬಾಲ್‌ ಚಾಂಪಿಯನ್‌ಷಿಪ್‌ ಫೈನಲ್ ಪಂದ್ಯದಲ್ಲಿ ಮಾಲ್ದೀವ್ಸ್ ವಿರುದ್ಧ 2-1 ಅಂತರದ ಗೋಲುಗಳಿಗೆ ಶರಣಾಗಿರುವ ಭಾರತ ರನ್ನರ್ ಅಪ್ ಪ್ರಶಸ್ತಿಗೆ ತೃಪ್ತಿಪಟ್ಟುಕೊಂಡಿದೆ. ಅಜೇಯವಾಗಿ ಫೈನಲ್ ಹಂತಕ್ಕೆ ಪ್ರವೇಶಿಸಿದ ಭಾರತ ಕಿರೀಟ ಗೆಲ್ಲುವ ಫೇವರಿಟ್ ತಂಡವೆನಿಸಿಕೊಂಡಿತು. ಆದರೆ ಬಾಂಗ್ಲಾದೇಶದ ಬಾಂಗಬಂಧು ರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ಮತ್ತದೇ ಶ್ರೇಷ್ಠ ನಿರ್ವಹಣೆ ನೀಡುವಲ್ಲಿ ವೈಫಲ್ಯ ಅನುಭವಿಸಿದೆ. ಮಾಲ್ದೀವ್ಸ್ ಪರ 19ನೇ ನಿಮಿಷದಲ್ಲಿ ಇಬ್ರಾಹಿಂ ಮಹೂದೀ ಹಾಗೂ 66ನೇ ನಿಮಿಷದಲ್ಲಿ ಅಲಿ ಫಾಸಿರ್ ವಿಜಯ ಗೋಲುಗಳನ್ನು ಬಾರಿಸಿದರು. ಭಾರತದ ಪರ ಇಂಜುರಿ ಟೈಮ್‌ನಲ್ಲಿ (90+2) ಗೋಲು ಬಾರಿಸಿದ ಸುಮಿತ್ ಪಸ್ಸಿ ಸೋಲಿನ ಅಂತರವನ್ನು ತಗ್ಗಿಸಿದರು. ಪಂದ್ಯದ ಮೊದಲಾರ್ಧದಲ್ಲಿ ಮಾಲ್ದೀವ್ಸ್ 1-0 ಅಂತರದ ಮುನ್ನಡೆ ದಾಖಲಿಸಿತು. ಬಳಿಕ ದ್ವಿತಿಯಾರ್ಧದಲ್ಲೂ ಭಾರತದ ಮೇಲೆ ಒತ್ತಡವನ್ನು ಹೇರಿತು. ಅನೇಕ ಅವಕಾಶಗಳನ್ನು ಕೈಚೆಲ್ಲಿರುವುದು ಭಾರತದ ಹಿನ್ನಡೆಗೆ ಕಾರಣವಾಯಿತು.
For the best experience use Awesummly app on your Android phone
Awesummly Chrome Extension Awesummly Android App