facebook pixel
chevron_right Entertainment
transparent
ನಿತಿನ್​ಗೆ ರಶ್ಮಿಕಾ ನಾಯಕಿ?
'ಗೀತ ಗೋವಿಂದಂ' ಹಿಟ್ ಆದ ನಂತರ ನಟಿ ರಶ್ಮಿಕಾ ಮಂದಣ್ಣ ಬೇಡಿಕೆ ಹೆಚ್ಚಿದೆ. ಅನೇಕ ನಿರ್ದೇಶಕರು ರಶ್ಮಿಕಾ ಕಾಲ್​ಶೀಟ್ ಪಡೆಯಲು ತುದಿಗಾಲಲ್ಲಿ ನಿಂತಿದ್ದಾರೆ. ಸದ್ಯದ ಬ್ರೇಕಿಂಗ್ ನ್ಯೂಸ್ ಏನೆಂದರೆ, ನಿತಿನ್ ನಟನೆಯ ಮುಂದಿನ ಚಿತ್ರದಲ್ಲಿ ರಶ್ಮಿಕಾ ನಾಯಕಿಯಾಗಿ ನಟಿಸಲಿದ್ದಾರಂತೆ. 'ಚಲೋ' ನಿರ್ದೇಶನ ಮಾಡಿದ್ದ ವೆಂಕಿ ಕುಡುಮುಲ ಹೊಸ ಚಿತ್ರ ನಿರ್ದೇಶನ ಮಾಡುತ್ತಿದ್ದು, ಅದಕ್ಕೆ ನಿತಿನ್ ನಾಯಕ. ಸದ್ಯ ನಿರ್ದೇಶಕರು ನಾಯಕಿಯ ಹುಡುಕಾಟದಲ್ಲಿ ತೊಡಗಿದ್ದಾರೆ. ಈಗಾಗಲೇ 'ಚಲೋ' ಚಿತ್ರದಲ್ಲಿ ರಶ್ಮಿಕಾ ಜತೆ ಕೆಲಸ ಮಾಡಿದ ಅನುಭವ ವೆಂಕಿ ಅವರಿಗಿದೆ. ಹಾಗಾಗಿ ಈ ಚಿತ್ರಕ್ಕೆ ರಶ್ಮಿಕಾ ನಾಯಕಿಯಾದರೆ ಉತ್ತಮ ಎನ್ನುವ ನಿರ್ಧಾರಕ್ಕೆ ಬಂದಿದ್ದಾರಂತೆ ವೆಂಕಿ. ಶೀಘ್ರದಲ್ಲೇ ರಶ್ಮಿಕಾಗೆ ಕಥೆ ಹೇಳಿ ಕಾಲ್ ಶೀಟ್ ಪಡೆಯಲು ಅವರು ಸಿದ್ಧರಾಗಿದ್ದಾರಂತೆ. ಈ ಮೂಲಕ 'ಚಲೋ' ಕಾಂಬಿನೇಷನ್​ನಲ್ಲಿ ಮತ್ತೊಂದು ಹಿಟ್ ಸಿನಿಮಾ ನೀಡಬೇಕು ಎನ್ನುವುದು ವೆಂಕಿ ಯೋಚನೆ.
For the best experience use Awesummly app on your Android phone
Awesummly Chrome Extension Awesummly Android App