facebook pixel
chevron_right Technology
transparent
ದಿನಂಪ್ರತಿ ಸಾಮಾಜಿಕ ಜಾಲತಾಣಗಳನ್ನು ಬಳಸಿದರೆ ಖಿನ್ನತೆಗೆ ಜಾರುತ್ತಾರಂತೆ!!
ದಿನಂಪ್ರತಿ ಸಾಮಾಜಿಕ ಜಾಲತಾಣಗಳನ್ನು ಬಳಸುವವರಿಗೆ ಅಪರಾಧಿ ಪ್ರಜ್ಞೆ, ಅಸಹಾಯಕತೆ, ಆತ್ಮ ದ್ವೇಷ, ತಾವು ಏನಕ್ಕೂ ಉಪಯೋಗವಿಲ್ಲ ಎಂಬಿತ್ಯಾದಿ ಭಾವನೆಗಳು ಉಂಟಾಗಿ ಅದು ಖಿನ್ನತೆಗೆ ಜಾರುವಂತೆ ಮಾಡುತ್ತಿದೆ ಎಂದು ವರದಿಯೊಂದು ತಿಳಿಸಿದೆ. ವಿಶ್ವದಲ್ಲಿ ಸುಮಾರು 300 ಮಿಲಿಯನ್ ಜನರು ಖಿನ್ನತೆಯಿಂದ ಬಳಲುತ್ತಿದ್ದು, ಇದಕ್ಕೆ ಬಹುಮುಖ್ಯ ಕಾರಣ ಸೋಷಿಯಲ್ ಮೀಡಿಯಾಗಳೇ ಆಗಿವೆ ಎಂದು ವಿಶ್ವ ಆರೋಗ್ಯ ಸಂಘಟನೆ ನೀಡಿರುವ ವರದಿಯಲ್ಲಿ ಹೇಳಲಾಗಿದೆ. ಹೌದು, ವ್ಯಕ್ತಿಯ ಚಿಂತನೆ, ಮನಸ್ಥಿತಿ, ಸಂವಹನ, ಚಟುವಟಿಕೆಗಳು, ಮತ್ತು ಸಾಮಾಜಿಕತೆಗೆ ಸಂಬಂಧಪಟ್ಟ ವರ್ತನೆಗಳನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಭಾಷೆ ಮತ್ತು ಭಾವನೆಗಳ ಮೂಲಕ ಹಂಚಿಕೊಳ್ಳಲಾಗುತ್ತದೆ. ಫೇಸ್‌ಬುಕ್, ಟ್ವಿಟ್ಟರ್ ನಂತರ ಸಾಮಾಜಿಕ ಮಾಧ್ಯಮಗಳಲ್ಲಿ ತಮ್ಮ ಆಲೋಚನೆ, ಅಭಿಪ್ರಾಯ, ಖುಷಿ, ನೋವುಗಳನ್ನು ಹಂಚಿಕೊಳ್ಳುವ ಲಕ್ಷಣಗಳು ಹೆಚ್ಚಾಗಿ ಕಂಡುಬರುತ್ತದೆ. ಇದು ಹೆಚ್ಚಿನವರಿಗೆ ಖಿನ್ನತೆ ಮೂಡಲು ಕಾರಣವಾಗಿದೆ ಎಂದು ಹೇಳಲಾಗಿದೆ.
For the best experience use Awesummly app on your Android phone
Awesummly Chrome Extension Awesummly Android App