facebook pixel
chevron_right Top
transparent
ಗಾಣಗಾಪುರದ ದತ್ತನ ಮೊರೆಹೋದ ಸಚಿವ ಡಿ.ಕೆ. ಶಿವಕುಮಾರ್​
ಜಲ ಸಂಪನ್ಮೂಲ ಸಚಿವ ಡಿ.ಕೆ. ಶಿವಕುಮಾರ್ ಅವರು ಜಿಲ್ಲೆಯ ಗಾಣಗಾಪುರದ ದತ್ತಾತ್ರೇಯ ದೇವಸ್ಥಾನಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಲಿದ್ದಾರೆ. ರಾಜಗುರು ದ್ವಾರಕನಾಥ್​ ಅವರ ಸೂಚನೆಯ ಮೇರೆಗೆ ಡಿಕೆಶಿ ಭಾನುವಾರ ಬೆಳಗ್ಗೆ 11 ಗಂಟೆಗೆ ಜಿಲ್ಲೆಯ ಅಫಜಲಪುರ ತಾಲೂಕಿನ ಗಾಣಗಾಪುರದಲ್ಲಿರುವ ದತ್ತಾತ್ರೇಯ ದೇವಸ್ಥಾನಕ್ಕೆ ಭೇಟಿ ನೀಡಲಿದ್ದು, ತಮ್ಮ ಸಂಕಷ್ಟಗಳನ್ನು ದೂರಮಾಡುವಂತೆ ದೇವರಿಗೆ ವಿಶೇಷ ಪ್ರಾರ್ಥನೆ ಸಲ್ಲಿಸಲಿದ್ದಾರೆ. ಆ ನಂತರ ಅವರು ಸಂಜೆ ವೇಳೆಗೆ ಕಲಬುರಗಿ ತಾಲೂಕಿನ ವೆಂಕಟಬೆನ್ನೂರ್​ ಗ್ರಾಮದಲ್ಲಿರುವ ವೀರಭದ್ರೇಶ್ವರ ದೇವಸ್ಥಾನದ ಜಾತ್ರೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ಈ ಹಿಂದೆ ಬಿಜೆಪಿ ಹಿರಿಯ ನಾಯಕ ಕೆ.ಎಸ್​. ಈಶ್ವರಪ್ಪ ಅವರು ಎರಡು ಬಾರಿ ಗಾಣಗಾಪುರ ದತ್ತಾತ್ರೇಯ ದೇವಸ್ಥಾನಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದ್ದರು.
For the best experience use Awesummly app on your Android phone
Awesummly Chrome Extension Awesummly Android App