facebook pixel
chevron_right Entertainment
transparent
ಗಣೇಶ್ ಹೊಸ ಚಿತ್ರ ಮರೆಯುವ ಮುನ್ನ
'ಗೋಲ್ಡನ್ ಸ್ಟಾರ್' ಗಣೇಶ್ ಮತ್ತು ನಿರ್ದೇಶಕ ಪ್ರೀತಮ್ ಗುಬ್ಬಿ ನಡುವಿನ ಒಡನಾಟ ಇಂದು ನಿನ್ನೆಯದಲ್ಲ. ಸಿನಿಮಾರಂಗಕ್ಕೆ ಎಂಟ್ರಿ ನೀಡುವಾಗಲೇ ಅವರಿಬ್ಬರೂ ಸ್ನೇಹಿತರು. ಗಣೇಶ್​ಗೆ ದೊಡ್ಡ ಬ್ರೇಕ್ ನೀಡಿದ 'ಮುಂಗಾರು ಮಳೆ' ಚಿತ್ರಕ್ಕೆ ಕಥೆ ಬರೆದದ್ದು ಇದೇ ಪ್ರೀತಮ್ ನಂತರ ಗಣೇಶ್ ನಾಯಕತ್ವದ 'ಮಳೆಯಲಿ ಜೊತೆಯಲಿ' ಹಾಗೂ 'ದಿಲ್ ರಂಗೀಲಾ' ಸಿನಿಮಾಗಳಿಗೆ ಪ್ರೀತಮ್ ನಿರ್ದೇಶನ ಮಾಡಿದ್ದರು. ಅಷ್ಟಕ್ಕೂ ಇಷ್ಟೆಲ್ಲ ಪೀಠಿಕೆ ಯಾಕೆಂದರೆ, 'ಗೋಲ್ಡನ್ ಸ್ಟಾರ್' ನಟನೆಯ ಹೊಸ ಚಿತ್ರಕ್ಕೆ ಪ್ರೀತಮ್ ನಿರ್ದೇಶನ ಮಾಡುವುದು ಪಕ್ಕಾ ಆಗಿದೆ. ಹೌದು, ತಮ್ಮ ಮುಂದಿನ ಚಿತ್ರಕ್ಕೆ 'ಮರೆಯುವ ಮುನ್ನ' ಎಂದು ಶೀರ್ಷಿಕೆ ನಿಗದಿ ಮಾಡಿದ್ದಾರೆ ಪ್ರೀತಮ್ ಇದೊಂದು ಪಕ್ಕಾ ರೊಮ್ಯಾಂಟಿಕ್ ಲವ್ ಸ್ಟೋರಿ ಚಿತ್ರವಾಗಲಿದ್ದು, ಗಣೇಶ್​ಗೆ ಹೇಳಿಮಾಡಿಸಿದಂತಹ ಪಾತ್ರ ಇದರಲ್ಲಿ ಇರಲಿದೆಯಂತೆ. ಸದ್ಯ ಪ್ರಿ-ಪ್ರೊಡಕ್ಷನ್ ಕೆಲಸಗಳು ಚಾಲ್ತಿಯಲ್ಲಿವೆ.
For the best experience use Awesummly app on your Android phone
Awesummly Chrome Extension Awesummly Android App