facebook pixel
chevron_right Business
transparent
ದೇಶ ನಡೆಸಲು ದುಡ್ಡಿಲ್ಲ: ಪಾಕಿಸ್ತಾನ ಪ್ರಧಾನಿ ಇಮ್ರಾನ್‌ ಖಾನ್‌
ಪಾಕಿಸ್ತಾನ ದಿವಾಳಿಯ ಅಂಚಿಗೆ ಬಂದಿರುವುದು ಈಗಾಗಲೇ ಜಗತ್ತಿಗೆ ಗೊತ್ತಾಗಿದೆ. ಇದೀಗ ಪ್ರಧಾನಿ ಇಮ್ರಾನ್‌ ಖಾನ್‌ ಖುದ್ದಾಗಿ ಪರಿಸ್ಥಿತಿಯ ಗಂಭೀರತೆಯನ್ನು ವಿವರಿಸಿದ್ದು, ದೇಶವನ್ನು ಮುನ್ನಡೆಸಲು ಸರಕಾರದ ಬಳಿ ದುಡ್ಡಿಲ್ಲ ಎಂದು ಅಸಹಾಯಕತೆ ವ್ಯಕ್ತಪಡಿಸಿದ್ದಾರೆ. ಹೊಸ ಬದಲಾವಣೆಯನ್ನು ತರುವ ಸಲುವಾಗಿ ದೇವರೇ ಇಂಥ ಬಿಕ್ಕಟ್ಟು ಸೃಷ್ಟಿಸಿದ್ದಾನೆ ಎಂದಿದ್ದಾರೆ. ಪಾಕಿಸ್ತಾನವನ್ನು ಸಾಲದ ಸುಳಿಯಿಂದ ಹೊರತರಲು ಕ್ರಮ ತೆಗೆದುಕೊಳ್ಳುವುದಾಗಿಯೂ ತಿಳಿಸಿದ್ದಾರೆ. ಹಾಗಾದರೆ ಪಾಕಿಸ್ತಾನ ತೀವ್ರ ಆರ್ಥಿಕ ಮುಗ್ಗಟ್ಟಿಗೆ ಸಿಲುಕಿರುವುದೇಕೆ? ಪಾಕಿಸ್ತಾನದ 21ನೇ ಪ್ರಧಾನಿ ಶಹೀದ್‌ ಖಾಕನ್‌ ಅಬ್ಬಾಸಿ ನೇತೃತ್ವದ ಸರಕಾರ ಕೈಗೊಂಡಿದ್ದ ರೋಗಗ್ರಸ್ತ ಯೋಜನೆಗಳೇ ಕಾರಣ ಎಂದು ಪ್ರಧಾನಿ ಇಮ್ರಾನ್‌ ಖಾನ್‌ ಆರೋಪಿಸುತ್ತಾರೆ. ಸಾಲದ ಹೊರೆ ಭಾರಿ ಪ್ರಮಾಣಕ್ಕೆ ಏರಿದೆ. ತೆರಿಗೆ ಹಣದ ಸಮರ್ಪಕ ಬಳಕೆಯಾಗಿಲ್ಲ ಎನ್ನುತ್ತಾರೆ ಖಾನ್‌ ವಿದೇಶಿ ವಿನಿಮಯ ಸಂಗ್ರಹ ತೀವ್ರ ಕುಸಿದಿದೆ.
For the best experience use Awesummly app on your Android phone
Awesummly Chrome Extension Awesummly Android App