facebook pixel
chevron_right Sports
transparent
ಸ್ಯಾಫ್ ಫುಟ್​ಬಾಲ್​ನಲ್ಲಿ ಭಾರತಕ್ಕೆ ಶಾಕ್
ಗರಿಷ್ಠ ಏಳು ಬಾರಿಯ ಚಾಂಪಿಯನ್ ಭಾರತ ತಂಡ ದಕ್ಷಿಣ ಏಷ್ಯನ್ ಫುಟ್​ಬಾಲ್ ಒಕ್ಕೂಟ (ಸ್ಯಾಫ್) ಫುಟ್​ಬಾಲ್ ಚಾಂಪಿಯನ್​ಷಿಪ್​ನ ಫೈನಲ್​ನಲ್ಲಿ ಮಾಲ್ಡೀವ್ಸ್ ತಂಡದ ವಿರುದ್ಧ ಆಘಾತ ಎದುರಿಸಿದೆ. ಏಕಪಕ್ಷೀಯವಾಗಿ ನಡೆದ ಸೆಣಸಾಟದಲ್ಲಿ ಸಂಪೂರ್ಣ ವೈಫಲ್ಯ ಕಂಡ ಕಳೆದ ಆವೃತ್ತಿಯ ಚಾಂಪಿಯನ್ ಭಾರತ, 1-2 ಗೋಲುಗಳಿಂದ ಮಾಲ್ಡೀವ್ಸ್ ವಿರುದ್ಧ ಪರಾಭವಗೊಂಡಿತು. ಫಿಫಾ ರ್ಯಾಂಕಿಂಗ್​ನಲ್ಲಿ 96ನೇ ಸ್ಥಾನದಲ್ಲಿರುವ ಭಾರತಕ್ಕಿಂತ ಸುಮಾರು 54 ಸ್ಥಾನ ಕೆಳಗಿರುವ ಮಾಲ್ಡೀವ್ಸ್ ಯಾವುದೇ ಹಂತದಲ್ಲೂ ತಿರುಗೇಟು ಎದುರಾಗದಂತೆ ಆಡಿತು. ಇದರಿಂದ ಭಾರತ ತನ್ನ 12ನೇ ಆವೃತ್ತಿಗಳಲ್ಲಿ 4ನೇ ಬಾರಿ ರನ್ನರ್ ಅಪ್​ಗೆ ತೃಪ್ತಿಪಟ್ಟರೆ, 2008ರ ಚಾಂಪಿಯನ್ ಮಾಲ್ಡೀವ್ಸ್ 2ನೇ ಬಾರಿ ಸ್ಯಾಫ್ ಪ್ರಶಸ್ತಿ ಗೆದ್ದ ಸಾಧನೆ ಮಾಡಿತು. ಮೊದಲಾರ್ಧದ 19ನೇ ನಿಮಿಷದಲ್ಲಿ ಇಬ್ರಾಹಿಂ ಹುಸೇನ್ ಗೋಲು ಸಿಡಿಸಿ 1-0 ಮುನ್ನಡೆ ತಂದರು.
For the best experience use Awesummly app on your Android phone
Awesummly Chrome Extension Awesummly Android App