facebook pixel
chevron_right Entertainment
transparent
ಗುಂಜನ್ ಜೀವನಚಿತ್ರದಲ್ಲಿ ಜಾನ್ವಿ ಕಪೂರ್
ಸಾಮಾನ್ಯ ಚಿತ್ರಗಳನ್ನು ನಿರ್ಮಾಣ ಮಾಡುವುದಕ್ಕಿಂತ ಜೀವನಚಿತ್ರ (ಬಯೋಪಿಕ್) ಸಿದ್ಧಪಡಿಸುವುದು ಸವಾಲಿನ ಸಂಗತಿ. ಇಲ್ಲಿ ಯಾವ ಅಂಶವೂ ಬಿಟ್ಟು ಹೋಗದಂತೆ ನೋಡಿಕೊಳ್ಳಬೇಕು. ಅಷ್ಟೇ ಅಲ್ಲ, ಇಲ್ಲದೆ ಇರುವ ವಿಚಾರಗಳನ್ನು ಸೇರಿಸಲೂ ಅವಕಾಶ ಇರುವುದಿಲ್ಲ. ವ್ಯಕ್ತಿಯೊಬ್ಬರ ಕುರಿತು ಸಿನಿಮಾ ನಿರ್ಮಾಣ ಮಾಡುವುದು ಎಷ್ಟು ಸವಾಲೋ, ಅದರಲ್ಲಿ ನಟಿಸುವುದು ಕೂಡ ಅಷ್ಟೇ ಕಷ್ಟ. ಬಯೋಪಿಕ್​ನಲ್ಲಿ ಬಣ್ಣ ಹಚ್ಚುವ ಕಲಾವಿದ ಅಭಿನಯದಲ್ಲಿ ಪಳಗಿದ್ದರೆ ಮಾತ್ರ ಪಾತ್ರಕ್ಕೆ ನ್ಯಾಯ ಒದಗಿಸಬಹುದು. ಈಗ ನವ ನಟಿ ಜಾನ್ವಿ ಕಪೂರ್ ಅಂಥದ್ದೊಂದು ಸವಾಲನ್ನು ಸ್ವೀಕರಿಸಲು ಮುಂದಾಗಿದ್ದಾರೆ. ಭಾರತೀಯ ವಾಯುಪಡೆ ಅಧಿಕಾರಿಯಾಗಿ ಸೇವೆ ಸಲ್ಲಿಸಿದ್ದ ಗುಂಜನ್ ಸಕ್ಸೇನಾ ಕುರಿತು ಸಿದ್ಧಗೊಳ್ಳುತ್ತಿರುವ ಬಯೋಪಿಕ್​ನಲ್ಲಿ ಜಾನ್ವಿ ಮುಖ್ಯಭೂಮಿಕೆ ನಿರ್ವಹಿಸುತ್ತಿದ್ದಾರೆ. ಕರಣ್ ಜೋಹರ್ ನಿರ್ಮಾಣ ಮಾಡುತ್ತಿರುವ ಈ ಚಿತ್ರಕ್ಕೆ ನಿರ್ದೇಶಕರು ಯಾರು ಎಂಬುದು ಇನ್ನಷ್ಟೇ ಅಂತಿಮಗೊಳ್ಳಬೇಕಿದೆ. ಗುಂಜನ್ ಅವತಾರದಲ್ಲಿ ಜಾನ್ವಿ ಪ್ರೇಕ್ಷಕರ ಎದುರು ಬರುತ್ತಿದ್ದಾರೆ.
For the best experience use Awesummly app on your Android phone
Awesummly Chrome Extension Awesummly Android App