facebook pixel
chevron_right Entertainment
transparent
ಗಗನಯಾತ್ರಿಯಾದ ಅಕ್ಕಿ-ವಿದ್ಯಾ?
ಎಲ್ಲವೂ ಅಂದುಕೊಂಡಂತೆ ನಡೆದಿದ್ದರೆ ಜನವರಿಯಲ್ಲೇ ಭಾರತದ ಮೊದಲ ಬಾಹ್ಯಾಕಾಶ ಸಿನಿಮಾ 'ಚಾಂದ್ ಮಾಮಾ ದೂರ್ ಕೆ' ಬಿಡುಗಡೆಯಾಗಿರಬೇಕಾಗಿತ್ತು. ಬಜೆಟ್ ಸಮಸ್ಯೆಯಿಂದ ಈ ಚಿತ್ರ ತೆರೆಕಾಣಲೇ ಇಲ್ಲ. ಆದರೆ ಬಾಲಿವುಡ್​ನ ಮತ್ತೊಂದು ಚಿತ್ರತಂಡ ಬಾಹ್ಯಾಕಾಶ ಕಥೆ ಆಧರಿಸಿ ಸಿನಿಮಾ ಮಾಡಲು ಅಣಿಯಾಗಿದೆ. ವಯಕಾಮ್ 18 ಮೋಷನ್ ಪೋಸ್ಟರ್ಸ್ ಹಾಗೂ ಆರ್. ಬಾಲ್ಕಿ ಜಂಟಿಯಾಗಿ ಚಿತ್ರ ನಿರ್ಮಾಣ ಮಾಡಲು ನಿರ್ಧರಿಸಿದ್ದಾರೆ ಎನ್ನಲಾಗಿದೆ. ಅಕ್ಷಯ್ಕುಮಾರ್, ವಿದ್ಯಾ ಬಾಲನ್, ನಿಮ್ರತ್ ಕೌರ್ ಈ ಚಿತ್ರದಲ್ಲಿ ನಟಿಸಲಿದ್ದಾರಂತೆ. ಮಂಗಳ ಗ್ರಹದೆಡೆಗಿನ ಪ್ರಯಾಣವನ್ನು ಆಧರಿಸಿ ಈ ಸಿನಿಮಾ ನಿರ್ವಣವಾಗಲಿದೆ. ಇನ್ನೂ ಹೆಸರಿಡದ ಈ ಸಿನಿಮಾಕ್ಕೆ 'ಪ್ಯಾಡ್​ವ್ಯಾನ್', 'ಹಾಲಿ ಡೇ', 'ಅಕಿರಾ' ಮುಂತಾದ ಚಿತ್ರಗಳಿಗೆ ಸಹ ನಿರ್ದೇಶಕರಾಗಿ ಕೆಲಸ ಮಾಡಿದ್ದ ಜಗನ್ ಶಕ್ತಿ ಆಕ್ಷನ್-ಕಟ್ ಹೇಳಲಿದ್ದಾರೆ. ಆದರೆ, ಈ ಬಗ್ಗೆ ಅಧಿಕೃತ ಮಾಹಿತಿ ಹೊರಬೀಳಬೇಕಿದೆ.
For the best experience use Awesummly app on your Android phone
Awesummly Chrome Extension Awesummly Android App