facebook pixel
chevron_right Entertainment
transparent
ಮಿಸ್ಸಿಂಗ್ ಬಾಯ್​ನಲ್ಲಿ ಅರ್ಚನಾ ಪತ್ರಕರ್ತೆ
ಕೇರಳದಿಂದ ಬಂದು ಕನ್ನಡದಲ್ಲಿ ಮಿಂಚಿದ ನಟಿಮಣಿಯರ ಸಂಖ್ಯೆ ದೊಡ್ಡದಿದೆ. ಭಾವನಾ ಮೆನನ್, ಪಾರ್ವತಿ, ನಿತ್ಯಾ ಮೆನನ್, ಮೀರಾ ಜಾಸ್ಮಿನ್, ಭಾಮಾ, ರಮ್ಯಾ ನಂಬೀಸನ್. ಈ ಸಾಲಿಗೆ ಹೊಸ ಸೇರ್ಪಡೆ ಅರ್ಚನಾ ಜಯಕೃಷ್ಣನ್. 'ಚೆಲುವೆಯೇ ನಿನ್ನ ನೋಡಲು' ಖ್ಯಾತಿಯ ರಘುರಾಮ್ ಅವರು ನೈಜ ಘಟನೆ ಆಧರಿಸಿ ನಿರ್ದೇಶನ ಮಾಡಿರುವ 'ಮಿಸ್ಸಿಂಗ್ ಬಾಯ್' ಚಿತ್ರದ ಮೂಲಕ ಚಂದನವನಕ್ಕೆ ಅರ್ಚನಾ ಪದಾರ್ಪಣೆ ಮಾಡುತ್ತಿದ್ದಾರೆ. ಮಾಡೆಲಿಂಗ್ ಕ್ಷೇತ್ರದಲ್ಲಿ ಸಕ್ರಿಯರಾಗಿದ್ದ ಅರ್ಚನಾ, ಒಂದೆರಡು ಮಲಯಾಳಂ ಸಿನಿಮಾಗಳಲ್ಲಿ ಬಣ್ಣ ಹಚ್ಚಿದ್ದಾರೆ. ಕಳೆದ ಕೆಲವು ವರ್ಷಗಳಿಂದ ಬೆಂಗಳೂರಿನಲ್ಲೇ ನೆಲೆಸಿದ್ದಾರೆ. 'ನಿರ್ವಪಕ ಕೊಲ್ಲ ಪ್ರವೀಣ್ ಮೊದಲಿನಿಂದಲೂ ಪರಿಚಿತರು. ಹೀಗೊಂದು ಸಿನಿಮಾ ಮಾಡುತ್ತಿದ್ದೇವೆ, ನಟಿಸುತ್ತೀರಾ ಎಂದು ಅವರು ಕೇಳಿದರು. ಚಿತ್ರದ ಕಥೆ ತುಂಬ ಇಷ್ಟವಾಗಿದ್ದರಿಂದ ಒಪ್ಪಿಕೊಂಡೆ' ಎಂದು 'ಮಿಸ್ಸಿಂಗ್ ಬಾಯ್'ಗೆ ನಾಯಕಿಯಾಗಿ ಆಯ್ಕೆಯಾಗಿದ್ದರ ಬಗ್ಗೆ ಮಾಹಿತಿ ನೀಡುತ್ತಾರೆ ಅರ್ಚನಾ.
For the best experience use Awesummly app on your Android phone
Awesummly Chrome Extension Awesummly Android App