facebook pixel
chevron_right Entertainment
transparent
ರೇಸ್​ ಟ್ರ್ಯಾಕ್​ನಲ್ಲಿ ದರ್ಶನ್
'ಚಾಲೆಂಜಿಂಗ್ ಸ್ಟಾರ್' ದರ್ಶನ್ ಬಳಿ ವಿವಿಧ ಬಗೆಯ ಕಾರುಗಳಿವೆ. ಅವರಿಗೆ ಮೊದಲಿನಿಂದಲೂ ಕಾರುಗಳ ಬಗ್ಗೆ ಕ್ರೇಜ್ ಜಾಸ್ತಿ. ಇತ್ತೀಚೆಗೆ ಅವರ ಸಂಗ್ರಹಕ್ಕೆ ಐಷಾರಾಮಿ ಲ್ಯಾಂಬೋರ್ಗಿನಿ ಕಾರು ಕೂಡ ಸೇರ್ಪಡೆಯಾಗಿತ್ತು. ಈಗ ದರ್ಶನ್ ರೇಸ್ ಟ್ರ್ಯಾಕ್​ಗೆ ಇಳಿದಿದ್ದಾರೆ. ಅವರು ಸ್ಪೋರ್ಟ್ಸ್ ಕಾರು ಓಡಿಸುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ವೋಕ್ಸ್​ವ್ಯಾಗನ್ ಸಂಸ್ಥೆಯ ಪೋಲೋ ಜಿಟಿಐ ಕಾರನ್ನು ದರ್ಶನ್ ಚಾಲನೆ ಮಾಡಿದ್ದಾರೆ. ಮೈಸೂರಿನ ರೇಸ್ ಟ್ರ್ಯಾಕ್ ನಲ್ಲಿ ವೃತ್ತಿಪರ ರೇಸರ್​ಗಳಂತೆ ಲೀಲಾಜಾಲವಾಗಿ ಕಾರು ಓಡಿಸಿದ್ದಾರೆ. ಮಣ್ಣು ರಸ್ತೆಯಲ್ಲಿ ಕಾರು ಧೂಳೆಬ್ಬಿಸುತ್ತ ಸಾಗುವ ವಿಡಿಯೋಗಳನ್ನು 'ಚಾಲೆಂಜಿಂಗ್ ಸ್ಟಾರ್' ಅಭಿಮಾನಿಗಳು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ. ಅಂದಹಾಗೆ, ದರ್ಶನ್​ಗೆ ಕಾರುಗಳ ಮೇಲೆ ಕ್ರೇಜ್ ಇರುವುದು ನಿಜ. ಆದರೆ ಅವರು ರೇಸ್ ಟ್ರ್ಯಾಕ್ ​ನಲ್ಲಿ ಕಾರ್ ಡ್ರೖೆವ್ ಮಾಡಿದ್ದರ ಹಿಂದಿನ ನಿಜವಾದ ಉದ್ದೇಶ ಬಹಿರಂಗಗೊಂಡಿಲ್ಲ.
For the best experience use Awesummly app on your Android phone
Awesummly Chrome Extension Awesummly Android App