facebook pixel
chevron_right Entertainment
transparent
ಚಿತ್ರರಂಗಕ್ಕೆ ಕಾಲಿಟ್ಟ ಖುಷಿಯಲ್ಲಿ ನೀನಾಸಂ ಪ್ರತಿಭೆ
'ಒಂದಲ್ಲಾ ಎರಡಲ್ಲಾ' ಚಿತ್ರದಲ್ಲಿನ 'ಇವತ್ ನನ್ ಮಗಂದ್ ಮಿನಿ ಮಿನಿ ಹ್ಯಾಪಿ ರಿಟರ್ನ್ಸ್ ಆಫ್ ದ ಡೇ. ' ಡೈಲಾಗ್​ಗೆ ಪ್ರೇಕ್ಷಕರು ಹೊಟ್ಟೆ ಹುಣ್ಣಾಗುವಂತೆ ನಕ್ಕಿದ್ದಾರೆ. ಸಿನಿಮಾದಲ್ಲಿ ಈ ಡೈಲಾಗ್ ಹೇಳಿರುವುದು ಆನಂದ್ ನೀನಾಸಂ. ರಂಗಭೂಮಿ ಪ್ರತಿಭೆ ಆಗಿರುವ ಆನಂದ್ ಇದೇ ಮೊದಲ ಬಾರಿಗೆ 'ಒಂದಲ್ಲಾ ಎರಡಲ್ಲಾ' ಮೂಲಕ ಚಿತ್ರರಂಗಕ್ಕೆ ಕಾಲಿಟ್ಟಿದ್ದಾರೆ. ಅವರು ನಿಭಾಯಿಸಿರುವ ಫೈನಾನ್ಶಿಯರ್ ನಂದಗೋಪಾಲ್ ಎಂಬ ಪಾತ್ರ ಎಲ್ಲರ ಗಮನ ಸೆಳೆದಿದೆ. ನೀನಾಸಂ ಒಡನಾಡಿ ಆಗಿರುವ ಆನಂದ್, ಮೂಲತಃ ತುಮಕೂರಿನವರು. 35 ವರ್ಷಗಳಿಂದಲೂ ರಂಗಭೂಮಿಯಲ್ಲಿ ತೊಡಗಿಕೊಂಡಿದ್ದಾರೆ. ಹಾಗಾದರೆ, ಇಷ್ಟು ವರ್ಷ ಸಿನಿಮಾಗಳಲ್ಲಿ ಯಾಕೆ ನಟಿಸಿಲಿಲ್ಲ? ಅದಕ್ಕೂ ಅವರ ಬಳಿ ಉತ್ತರವಿದೆ. 'ಬಹಳ ಹಿಂದೆಯೇ ನಾನು ಸಿನಿಮಾಗೆ ಬರಬಹುದಿತ್ತು. ಆದರೆ, ಕೆಲ ಕಾರಣಗಳಿಂದಾಗಿ ಸಿನಿಮಾರಂಗದಿಂದ ದೂರ ಇದ್ದೆ. ಈಗ ಮಗಳ ಮದುವೆ ಮಾಡಿದ್ದೇನೆ' ಎನ್ನುತ್ತಾರವರು.
For the best experience use Awesummly app on your Android phone
Awesummly Chrome Extension Awesummly Android App