facebook pixel
chevron_right Top
transparent
ಇಂದು ರಾತ್ರಿ ಬ್ರಿಟನ್​ನ 2 ಉಪಗ್ರಹಗಳ ಉಡಾವಣೆ
ಭಾರತೀಯ ಬಾಹ್ಯಾಕಾಶ ಸಂಸ್ಥೆ ಇಸ್ರೋ ಇನ್ನೊಂದು ಮೈಲಿಗಲ್ಲು ಮುಟ್ಟಿದ್ದು, ಮೊದಲ ಖಾಸಗಿ ಉಪಗ್ರಹ ಉಡಾವಣೆಗೆ ಕ್ಷಣಗಣನೆ ಆರಂಭವಾಗಿದೆ. ಬ್ರಿಟನ್​ನ 2 ಖಾಸಗಿ ಉಪಗ್ರಹಗಳನ್ನು ಭಾನುವಾರ ರಾತ್ರಿ 10.07ಕ್ಕೆ ಉಡಾವಣೆ ಮಾಡಲಿದೆ. ಅರಣ್ಯ ಮ್ಯಾಪಿಂಗ್, ಹವಾಮಾನ ವೈಪರೀತ್ಯ ಎಚ್ಚರಿಕೆ ಸಂದೇಶ ನೀಡುವ ನೋವಾಸರ್ ಹಾಗೂ ಎಸ್1-4 ಉಪಗ್ರಹಗಳನ್ನು ಶ್ರೀಹರಿಕೋಟದಿಂದ ಉಡಾವಣೆ ಮಾಡಲಾಗುತ್ತದೆ ಎಂದು ಇಸ್ರೋ ತಿಳಿಸಿದೆ. ವರ್ಷದಲ್ಲಿ ಮೊದಲ ಸಣ್ಣ ರಾಕೆಟ್: ಇನ್ನೊಂದು ವರ್ಷದೊಳಗೆ ಸಣ್ಣ ರಾಕೆಟ್ ಮೂಲಕ ಉಪಗ್ರಹ ಉಡಾವಣೆ ಮಾಡಲು ಇಸ್ರೋ ತಯಾರಿ ನಡೆಸುತ್ತಿದೆ. ಸುಮಾರು 500-700 ಕೆ.ಜಿ ತೂಕದ ಉಪಗ್ರಹವನ್ನು ಒಯ್ಯಬಹುದಾದ ರಾಕೆಟ್ ನಿರ್ಮಾಣ ಪ್ರಗತಿಯಲ್ಲಿದೆ. ಈ ರಾಕೆಟ್ ಉಡಾವಣೆಗೆ ಬೇಕಿರುವ ಲಾಂಚ್​ಪ್ಯಾಡ್​ಗಳ ನಿರ್ಮಾಣ ಕಾರ್ಯವು ಶ್ರೀಹರಿಕೋಟಾದಲ್ಲಿ ನಡೆಯುತ್ತಿದೆ ಎಂದು ಇಸ್ರೋ ಅಧ್ಯಕ್ಷ ಕೆ.ಶಿವನ್ ತಿಳಿಸಿದ್ದಾರೆ.
For the best experience use Awesummly app on your Android phone
Awesummly Chrome Extension Awesummly Android App