facebook pixel
chevron_right Top
transparent
ಮುಂಬೈನಲ್ಲಿ ಪೆಟ್ರೋಲ್​ಗೆ 89 ರೂಪಾಯಿ
ಪೆಟ್ರೋಲ್ ಮತ್ತು ಡೀಸೆಲ್ ದರ ಶನಿವಾರ ಹೊಸ ದಾಖಲೆ ಹಂತಕ್ಕೆ ತಲುಪಿದೆ. ಮುಂಬೈನಲ್ಲಿ ಪ್ರತಿ ಲೀಟರ್ ಪೆಟ್ರೋಲ್ ಬೆಲೆ 89.01 ಮತ್ತು ಡೀಸೆಲ್ 78.07ಕ್ಕೆ ಮುಟ್ಟಿದೆ. ಬೆಂಗಳೂರಿನಲ್ಲಿ ಪೆಟ್ರೋಲ್ ದರ 37 ಪೈಸೆ ಏರಿಕೆಯಾಗಿದ್ದು ಶನಿವಾರ 84.30ಕ್ಕೆ ತಲುಪಿತು. ಡೀಸೆಲ್ ದರ 25 ಪೈಸೆ ಹೆಚ್ಚಳವಾಗಿ 75.91ಕ್ಕೆ ತಲುಪಿದೆ. ಅಂತಾರಾಷ್ಟ್ರೀಯ ಕಚ್ಚಾ ತೈಲ ಮಾರುಕಟ್ಟೆಯಲ್ಲಿ ಪ್ರತಿ ಬ್ಯಾರಲ್​ಗೆ 78 ಡಾಲರ್ ಇದ್ದು, ಇನ್ನಷ್ಟು ಏರಿಕೆ ಯಾಗುವ ಸಾಧ್ಯತೆ ಇದೆ. ಈ ಕಾರಣದಿಂದ ಆಗಸ್ಟ್ 1ರಿಂದೀಚೆಗೆ ಪೆಟ್ರೋಲ್ ದರ ಶೇ. 6, ಡೀಸೆಲ್ ಬೆಲೆ ಶೇ.8 ಹೆಚ್ಚಳವಾಗಿದೆ. ಡಾಲರ್ ಎದುರು ರೂಪಾಯಿ ಕುಸಿದಿರುವುದೂ ತೈಲ ದರ ಹೆಚ್ಚಲು ಕಾರಣವಾಗಿದೆ. ದರ 99.99ಕ್ಕಿಂತ ಹೆಚ್ಚಾಗಲಾರದು!: ಗಗನಮುಖಿ ಯಾಗಿರುವ ಪೆಟ್ರೋಲ್ ದರ ಪ್ರತಿ ಲೀಟರ್​ಗೆ 99.99ಕ್ಕಿಂತ ಹೆಚ್ಚಿಗೆ ಆಗಲಾರದು.
For the best experience use Awesummly app on your Android phone
Awesummly Chrome Extension Awesummly Android App