facebook pixel
chevron_right Sports
transparent
ಸೆರ್ಬಿಯಾ ವಿರುದ್ಧ ಭಾರತಕ್ಕೆ ಸೋಲು
ಭಾರತ ತಂಡ ಸತತ ಐದನೇ ವರ್ಷ ಡೇವಿಸ್ ಕಪ್ ವಿಶ್ವ ಗುಂಪಿನ ಪ್ಲೇಆಫ್ ಮುಖಾಮುಖಿಯಲ್ಲಿಯೇ ಸೋಲು ಕಂಡಿದೆ. ಹಳೆ ಮಾದರಿಯಲ್ಲಿ ನಡೆಯಲಿರುವ ಕೊನೆಯ ಡೇವಿಸ್ ಕಪ್ ಟೂರ್ನಿಯಲ್ಲಿ ಉತ್ತಮ ನಿರ್ವಹಣೆ ತೋರುವಲ್ಲಿ ವಿಫಲವಾದ ಭಾರತ ತಂಡ ಆತಿಥೇಯ ಸೆರ್ಬಿಯಾ ವಿರುದ್ಧ ನಡೆದ ಮುಖಾಮುಖಿಯಲ್ಲಿ ಎರಡು ರಿವರ್ಸ್ ಸಿಂಗಲ್ಸ್ ಪಂದ್ಯಗಳು ಬಾಕಿ ಇರುವಂತೆಯೇ 0-3ರಿಂದ ಸೋಲು ಕಂಡಿದೆ. ಇಬಾರ್​ನ ಕ್ರಾಲ್​ಜಿವೊ ಸ್ಪೋರ್ಟ್ಸ್ ಸೆಂಟರ್​ನ ಕ್ಲೇ ಕೋರ್ಟ್ ನಲ್ಲಿ ಶನಿವಾರ ನಡೆದ ಡಬಲ್ಸ್ ಪಂದ್ಯದಲ್ಲಿ ರೋಹನ್ ಬೋಪಣ್ಣ ಹಾಗೂ ಎನ್. ಶ್ರೀರಾಮ್ ಬಾಲಾಜಿ ಜೋಡಿ 6-7 (5), 2-6, 6-7 (4) ರಿಂದ ನಿಕೋಲಾ ಮಿಲೊಜೆವಿಕ್ ಹಾಗೂ ಡಾನಿಲೋ ಪೆಟ್ರೋವಿಕ್ ಜೋಡಿಯ ವಿರುದ್ಧ ಶರಣಾಯಿತು.
For the best experience use Awesummly app on your Android phone
Awesummly Chrome Extension Awesummly Android App