facebook pixel
chevron_right Sports
transparent
ಆಸ್ಟ್ರೇಲಿಯಾ ಪ್ರವಾಸದಲ್ಲಿ ಹೆಚ್ಚುವರಿ ಅಭ್ಯಾಸ ಪಂದ್ಯ
ಈ ವರ್ಷದ ಅಂತ್ಯದಲ್ಲಿ ನಡೆಯಲಿರುವ ಆಸ್ಟ್ರೇಲಿಯಾ ಪ್ರವಾಸದ ಟೆಸ್ಟ್ ಸರಣಿಯ ವೇಳೆ ಹೆಚ್ಚುವರಿ ಅಭ್ಯಾಸ ಪಂದ್ಯದ ವ್ಯವಸ್ಥೆ ಮಾಡುವಂತೆ ಟೀಮ್ ಇಂಡಿಯಾ ಕೋಚ್ ರವಿಶಾಸ್ತ್ರಿ ಮನವಿಯನ್ನು ಕ್ರಿಕೆಟ್ ಆಸ್ಟ್ರೇಲಿಯಾ ಪುರಸ್ಕರಿಸಿದೆ. ಇತ್ತೀಚೆಗೆ ಮುಗಿದ ಇಂಗ್ಲೆಂಡ್ ಪ್ರವಾಸದ ಟೆಸ್ಟ್ ಸರಣಿಗೂ ಮುನ್ನ ಭಾರತ ಕೇವಲ 1 ಅಭ್ಯಾಸ ಪಂದ್ಯವಾಡಿತ್ತು. ಆದರೆ, ಡಿಸೆಂಬರ್ 6ರಂದು ಆಸ್ಟ್ರೇಲಿಯಾ ವಿರುದ್ಧ ಅಡಿಲೇಡ್​ನಲ್ಲಿ ಆರಂಭವಾಗಲಿರುವ ಟೆಸ್ಟ್ ಸರಣಿಗೂ ಮುನ್ನ ಹೆಚ್ಚಿನ ಅಭ್ಯಾಸ ಪಂದ್ಯಗಳಿಗೆ ಮನವಿ ಮಾಡಿದ್ದಾರೆ. 'ಬಿಸಿಸಿಐ ಜತೆ ಈ ಕುರಿತಾಗಿ ರ್ಚಚಿಸಲು ನಾವು ಸಿದ್ಧ. ಆಸ್ಟ್ರೇಲಿಯಾ ವಿರುದ್ಧ ಸರಣಿಗೂ ಮುನ್ನ ಹೆಚ್ಚಿನ ಅಭ್ಯಾಸ ಪಂದ್ಯಕ್ಕಾಗಿ ಲಿಖಿತ ಮನವಿ ಬಂದರೆ ಅದನ್ನು ಪರಿಶೀಲಿಸುತ್ತೇವೆ' ಎಂದು ಕ್ರಿಕೆಟ್ ಆಸ್ಟ್ರೇಲಿಯಾ ವಕ್ತಾರ ತಿಳಿಸಿದ್ದಾರೆ. ಇಂಗ್ಲೆಂಡ್​ನಲ್ಲಿ ಭಾರತ ತಂಡ ಏಕೈಕ ಅಭ್ಯಾಸ ಪಂದ್ಯವನ್ನು ಎಸೆಕ್ಸ್ ವಿರುದ್ಧ ಆಡಿತ್ತು.
For the best experience use Awesummly app on your Android phone
Awesummly Chrome Extension Awesummly Android App