facebook pixel
chevron_right Sports
transparent
ಸರಿತಾ ದೇವಿಗೆ ಕಂಚಿನ ಪದಕ
ಮಾಜಿ ವಿಶ್ವ ಚಾಂಪಿಯನ್ ಎಲ್. ಸರಿತಾ ದೇವಿ ಪೋಲೆಂಡ್​ನಲ್ಲಿ ನಡೆಯುತ್ತಿರುವ 13ನೇ ಸಿಲೆಸಿಯನ್ ಓಪನ್ ಬಾಕ್ಸಿಂಗ್ ಸ್ಪರ್ಧೆಯಲ್ಲಿ ಕಂಚಿನ ಪದಕ ಜಯಿಸಿದ್ದಾರೆ. 60 ಕೆಜಿ ವಿಭಾಗದ ಸೆಮಿಫೈನಲ್ ಪಂದ್ಯದಲ್ಲಿ ಸರಿತಾ 0-5ರಿಂದ ಕಜಾಕ್​ಸ್ತಾನದ ಕರಿನಾ ಇಬ್ರಗಿಮೋವಾ ವಿರುದ್ಧ ಸೋಲು ಕಂಡರು. ಈ ಮೂಲಕ ಸರಿತಾ ಕೂಟದಲ್ಲಿ ಕಂಚಿನ ಪದಕ ಜಯಿಸಿದ ಮೂರನೇ ಭಾರತೀಯರೆನಿಸಿದರು. ಈ ಮುನ್ನ ಲೊವ್ಲಿನಾ ಬೊಗೊಹೈನ್ ಮತ್ತು ಪೂಜಾ ರಾಣಿ (81ಕೆಜಿ) ಸೆಮಿಫೈನಲ್​ನಲ್ಲಿ ಸೋತು ಕಂಚಿಗೆ ತೃಪ್ತಿಪಟ್ಟಿದ್ದರು. ಕೂಟದಲ್ಲಿ ಮೇರಿ ಕೋಮ್ ಮತ್ತು ಮನೀಷಾ ಫೈನಲ್ ಹಂತಕ್ಕೇರಿದ್ದು, ಸ್ವರ್ಣ ಪದಕ ಗೆಲುವಿನ ನಿರೀಕ್ಷೆಯಲ್ಲಿದ್ದಾರೆ. ಕೂಟದ ಜೂನಿಯರ್ ವಿಭಾಗದಲ್ಲಿ ಭಾರತ 6 ಚಿನ್ನ, 6 ಬೆಳ್ಳಿ ಮತ್ತು 1ಕಂಚು ಸಹಿತ ಒಟ್ಟು 13 ಪದಕಗಳನ್ನು ಜಯಿಸಿದೆ.
For the best experience use Awesummly app on your Android phone
Awesummly Chrome Extension Awesummly Android App