facebook pixel
chevron_right Sports
transparent
ಒಲಿಂಪಿಕ್ಸ್​ಗೆ 11.10 ಸೆಕೆಂಡ್ಸ್ ಗುರಿ
ಕ್ರೀಡಾಜೀವನದಲ್ಲಿ ಎದುರಾಳಿಗಿಂತ ಹೆಚ್ಚಾಗಿ ವಿಶ್ವ ಅಥ್ಲೆಟಿಕ್ಸ್ ಸಂಸ್ಥೆಯ(ಐಎಎಎಫ್) ಸವಾಲುಗಳನ್ನೇ ಹೆಚ್ಚಾಗಿ ಎದುರಿಸಿದ ಅಥ್ಲೀಟ್ ದ್ಯುತಿ ಚಂದ್, ಪ್ರಸ್ತುತ ಭಾರತದ ವೇಗದ ರಾಣಿ. 100 ಮೀಟರ್ ಹಾಗೂ 200 ಮೀಟರ್ ವಿಭಾಗದಲ್ಲಿ 2018ರ ಏಷ್ಯಾಡ್ ಬೆಳ್ಳಿ ಪದಕ ಗೆದ್ದ ದ್ಯುತಿ ಚಂದ್, ಇತ್ತೀಚೆಗೆ ಬೆಂಗಳೂರಿಗೆ ಆಗಮಿಸಿದ್ದರು. ಪ್ರೆಸ್​ಕ್ಲಬ್​ನಲ್ಲಿ ನಡೆದ ಕಾರ್ಯಕ್ರಮದ ಬಳಿಕ ಸಂವಾದದಲ್ಲಿ ಪಾಲ್ಗೊಂಡಿದ್ದ ಒಡಿಶಾದ 22 ವರ್ಷದ ಸ್ಪ್ರಿಂಟರ್, ಗೆದ್ದ ಪದಕಗಳನ್ನು ಹೆಮ್ಮೆಯಿಂದ ತೋರಿಸುತ್ತ, ಭವಿಷ್ಯದ ಕ್ರೀಡಾಕೂಟ ಹಾಗೂ ತಮ್ಮ ಗುರಿಗಳ ಬಗ್ಗೆ ಮಾತನಾಡಿದರು. ಒಲಿಂಪಿಕ್ಸ್​ಗಾಗಿ ಈಗಲೇ ಅಭ್ಯಾಸ ಆರಂಭಿಸಿಲ್ಲ. ಅರ್ಹತಾ ಹಂತದ ಬಳಿಕವೇ ಒಲಿಂಪಿಕ್ಸ್ ನಲ್ಲಿ ನನ್ನ ಸ್ಪರ್ಧೆಯ ಬಗ್ಗೆ ಖಚಿತವಾಗಲಿದೆ. ಆ ನಂತರವೇ ಅಭ್ಯಾಸವನ್ನು ಭಾರತದಲ್ಲಿ ಮಾಡಬೇಕೇ ಅಥವಾ ವಿದೇಶದಲ್ಲಿ ಮಾಡಬೇಕೇ ಎನ್ನುವುದನ್ನು ನಿರ್ಧರಿಸುತ್ತೇನೆ. 2019ರ ಕೊನೆಯವರೆಗೂ ಪ್ರಸ್ತುತ ಈಗ ಇರುವ ಅಭ್ಯಾಸ ಪದ್ಧತಿಯನ್ನೇ ಮುಂದುವರಿಸುತ್ತೇನೆ.
For the best experience use Awesummly app on your Android phone
Awesummly Chrome Extension Awesummly Android App