facebook pixel
chevron_right Sports
transparent
ಏಷ್ಯಾಕಪ್ ಸೈಕ್ಲಿಂಗ್​ಗೆ ರಾಜ್ಯದ ದಾನಮ್ಮ, ವೆಂಕಪ್ಪ
ಏಷ್ಯಾಡ್​ನಲ್ಲಿ ಭಾರತದ ಕ್ರೀಡಾಪಟುಗಳು ಐತಿಹಾಸಿಕ ಸಾಧನೆ ಮಾಡಿದ್ದು, ದೇಶದ ಸೈಕ್ಲಿಸ್ಟ್ ಗಳು ಮತ್ತೊಂದು ಮಹತ್ವದ ಸಾಧನೆಗಾಗಿ ಟ್ರ್ಯಾಕ್ ಏಷ್ಯಾಕಪ್​ನತ್ತ ಚಿತ್ತ ಹರಿಸಿದ್ದಾರೆ. ಗ್ರಾಮೀಣ ಪ್ರತಿಭೆ ವೆಂಕಪ್ಪ ಕೆಂಗಲಗುತ್ತಿ ಹಾಗೂ ದಾನಮ್ಮ ಚಿಚಖಂಡಿ ಸೆ. 21ರಿಂದ ನವದೆಹಲಿಯಲ್ಲಿ ನಡೆಯಲಿರುವ ಏಷ್ಯಾಕಪ್ ಸೈಕ್ಲಿಂಗ್​ಗೆ ಆಯ್ಕೆಯಾಗಿದ್ದಾರೆ. ಕಳೆದ ಏಷ್ಯಾಕಪ್ ಟ್ರ್ಯಾಕ್ ಸೈಕ್ಲಿಂಗ್​ನಲ್ಲಿ ಭಾರತ ತಂಡ ಅಗ್ರಸ್ಥಾನ ಪಡೆದಿತ್ತು. 7 ಚಿನ್ನ, 9 ಬೆಳ್ಳಿ ಹಾಗೂ 5 ಕಂಚು ಸಹಿತ ಒಟ್ಟು 21 ಪದಕ ಗೆಲ್ಲುವ ಮೂಲಕ ಭಾರತ ಮೊದಲ ಸ್ಥಾನ ಪಡೆದುಕೊಂಡಿತ್ತು. ಕಳೆದ ಏಷ್ಯಾಡ್​ನಲ್ಲಿ ಭಾಗವಹಿಸಿದ್ದ ರಾಜು ಹಾಗೂ ಮೇಘಾ ಅನಾರೋಗ್ಯದ ಕಾರಣ ಏಷ್ಯಾಕಪ್​ನಿಂದ ಹೊರ ಉಳಿದಿದ್ದಾರೆ. ಹಲವು ಪದಕ ಸಾಧಕಿ ದಾನಮ್ಮ.
For the best experience use Awesummly app on your Android phone
Awesummly Chrome Extension Awesummly Android App