facebook pixel
chevron_right Top
transparent
ಜೇಟ್ಲಿ-ಮಲ್ಯ ಭೇಟಿ ನಡೆದಿಲ್ಲ ಸ್ಪಷ್ಟೀಕರಣ ನೀಡಿದ ಬಿಜೆಪಿ
ತಾವು ಭಾರತ ತೊರೆಯುವ ಮೊದಲು ಕೇಂದ್ರ ವಿತ್ತ ಸಚಿವ ಅರುಣ್ ಜೇಟ್ಲಿಯನ್ನು ಭೇಟಿ ಮಾಡಿದ್ದಾಗಿ ಉದ್ಯಮಿ ವಿಜಯ್ ಮಲ್ಯ ಹೇಳಿಕೆ ನೀಡಿರುವುದು ಬಿಜೆಪಿಗೆ ಬಿಸಿ ತುಪ್ಪವಾಗಿ ಪರಿಣಮಿಸಿದೆ. ಹೀಗಾಗಿ ಮಲ್ಯ ದೇಶ ತೊರೆಯುವ ಹಿಂದಿನ ದಿನ ಸಚಿವ ಜೇಟ್ಲಿ ಅವರ ದಿನಚರಿಯನ್ನು ಬಿಜೆಪಿ ಬಹಿರಂಗ ಮಾಡಿದೆ. ಜೇಟ್ಲಿ ದಿನಚರಿ ನೀಡಿದ ಬಿಜೆಪಿ: 2016 ಮಾ. 1ರಂದು ಜೇಟ್ಲಿ ಹಾಗೂ ಮಲ್ಯ ಭೇಟಿ ನಡೆದಿದೆ ಎಂದು ಪುನಿಯಾ ಆರೋಪಿಸಿದ್ದರು. ಜೇಟ್ಲಿ ಅವರ ಅಂದಿನ ದಿನಚರಿಯನ್ನು ಬಹಿರಂಗಗೊಳಿಸುವ ಮೂಲಕ ಈ ಆರೋಪವನ್ನು ಬಿಜೆಪಿ ಅಲ್ಲಗಳೆದಿದೆ. ಅಂದು ಬೆಳಗ್ಗೆ 9.30ರಿಂದ 10.30ರ ವರೆಗೆ ಬಿಜೆಪಿ ಸಂಸದೀಯ ಸಭೆಯಲ್ಲಿ ಸಚಿವ ಜೇಟ್ಲಿ ಭಾಗಿಯಾಗಿದ್ದರು. 10.30ರ ಬಳಿಕ ಅವರು ಸಂಸತ್ ಭವನಕ್ಕೆ ತೆರಳಿ ಪ್ರಧಾನಿ ನರೇಂದ್ರ ಮೋದಿ ಜತೆ ಅನೌಪಚಾರಿಕ ಸಭೆ ನಡೆಸಿದರು.
For the best experience use Awesummly app on your Android phone
Awesummly Chrome Extension Awesummly Android App