facebook pixel
chevron_right Top
transparent
ಪರಿಕ್ಕರ್ ಅನಾರೋಗ್ಯ ಇಕ್ಕಟ್ಟಿನಲ್ಲಿ ಬಿಜೆಪಿ
ಒಂದೆಡೆ ಕ್ಯಾನ್ಸರ್​ಗೆ ತುತ್ತಾಗಿರುವ ಗೋವಾ ಸಿಎಂ ಮನೋಹರ ಪರಿಕ್ಕರ್ ಆರೋಗ್ಯ ಹದಗೆಡುತ್ತಿದ್ದರೆ ಮತ್ತೊಂದೆಡೆ ಗೋವಾ ಸರ್ಕಾರದಲ್ಲಿ ಅಸ್ಥಿರತೆ ಸೃಷ್ಟಿಯಾಗುವ ಲಕ್ಷಣಗಳು ಗೋಚರಿ ಸಿದ್ದು, ಸಿಕ್ಕ ಅವಕಾಶ ಬಳಸಿಕೊಳ್ಳುವ ತವಕ ಕಾಂಗ್ರೆಸ್​ನಲ್ಲಿ ಎದ್ದುಕಾಣುತ್ತಿದೆ. ಪಿತ್ತಜನಕಾಂಗದ ಕ್ಯಾನ್ಸರ್​ಗೆ ಈಚೆಗಷ್ಟೇ ಅಮೆರಿಕದಲ್ಲಿ ಚಿಕಿತ್ಸೆ ಪಡೆದು ಭಾರತಕ್ಕೆ ವಾಪಸಾಗಿದ್ದ ಪರಿಕ್ಕರ್​ಗೆ ಮತ್ತೆ ಸಮಸ್ಯೆ ಕಾಣಿಸಿಕೊಂಡಿರುವ ಕಾರಣ ಪ್ರಧಾನಿ ನರೇಂದ್ರ ಮೋದಿ ಸಲಹೆ ಮೇರೆಗೆ ದೆಹಲಿಯ ಏಮ್್ಸ ಆಸ್ಪತ್ರೆಗೆ ದಾಖಲಾಗಿದ್ದಾರೆ. ಏತನ್ಮಧ್ಯೆ, ಸಿಎಂ ಸ್ಥಾನವನ್ನು ಬೇರೆಯವರಿಗೆ ಹಸ್ತಾಂತರಿಸಿ ಎಂದು ಪರಿಕ್ಕರ್ ಅವರೇ ಹೈಕಮಾಂಡಿನಲ್ಲಿ ಕೇಳಿಕೊಂಡಿದ್ದಾರೆ ಎನ್ನಲಾಗಿದೆ. ಹೀಗಾಗಿಯೇ ಮೈತ್ರಿ ಪಕ್ಷ ಮಹಾರಾಷ್ಟ್ರ ಗೋಮಂತಕ್ ಪಾರ್ಟಿಯ (ಎಂಜಿಪಿ) ಹಿರಿಯ ನಾಯಕ, ಪಿಡಬ್ಲ್ಯುಡಿ ಸಚಿವ ಸುದಿನ್ ದಿವಾಲಿಕರ್ ಅವರಿಗೆ ಸಿಎಂ ಹುದ್ದೆಯ ಜವಾಬ್ದಾರಿ ನೀಡಬೇಕು ಎಂದು ಕೇಸರಿ ನಾಯಕರನ್ನು ಒತ್ತಾಯಿಸಲಾಗುತ್ತಿದೆ.
For the best experience use Awesummly app on your Android phone
Awesummly Chrome Extension Awesummly Android App