facebook pixel
chevron_right Top
transparent
25 ವರ್ಷದಿಂದ ಊಟ ಮಾಡದ ಮಲ್ಲಮ್ಮ..!
ತಾಲೂಕಿನ ಶಿರೋಳ ಗ್ರಾಮದ ಮಲ್ಲಮ್ಮ ಸಿದ್ದನಗೌಡ ಪಾಟೀಲ (53) ಎಂಬವರು 25 ವರ್ಷಗಳಿಂದ ಊಟ ಮಾಡದೆ ಚಹಾ, ನೀರು ಹಾಗೂ ಎಲೆ-ಅಡಕೆ ತಿಂದೇ ಜೀವನ ನಡೆಸುತ್ತಿರು ವುದು ಅಚ್ಚರಿ ಉಂಟು ಮಾಡಿದೆ. 'ನನಗೆ ಹೆರಿಗೆ ಸಂದರ್ಭದಲ್ಲಿ ಮಗು ಹೊಟ್ಟೆಯಲ್ಲೇ ಸಾವಿಗೀಡಾ ಯಿತು. ಇದರಿಂದ ಆಘಾತಗೊಂಡು ಊಟ ಮಾಡುವುದನ್ನು ಬಿಟ್ಟೆ' ಎಂದು ಕಾರಣ ಹೇಳುತ್ತಾರೆ ಮಲ್ಲಮ್ಮ. ಮಲ್ಲಮ್ಮ ನಿತ್ಯ 2 ಹೊತ್ತು ಚಹಾ, ಎಲೆ-ಅಡಕೆ, ನೀರು ಮಾತ್ರ ಸೇವಿಸುತ್ತಾರೆ. ಊಟ ಮಾಡಿ ಎಂದರೆ ಹೊಟ್ಟೆ ತುಂಬಿದೆ ಎನ್ನುತ್ತಾರೆ. ಅಲ್ಲದೆ 25 ವರ್ಷಗಳಿಂದ ಬಹಿರ್ದೆಸೆಗೆ ಹೋಗಿಲ್ಲವಂತೆ. ಈಕೆ ಊಟ ಮಾಡುವುದಿಲ್ಲ ಎಂದು ಸಹೋದರಿ ಕಾಶಿಬಾಯಿ ಹೇಳುತ್ತಾರೆ. ಯಾರಾದರೂ ಕರೆದರೂ ಅವರ ಜತೆ ಹೆಚ್ಚು ಮಾತನಾಡದೆ, ನಾಲ್ಕೈದು ಮನೆಯವರೊಂದಿಗಷ್ಟೇ ಒಡನಾಟ ಇಟ್ಟುಕೊಂಡಿದ್ದಾರೆ.
For the best experience use Awesummly app on your Android phone
Awesummly Chrome Extension Awesummly Android App