facebook pixel
chevron_right Top
transparent
ಸುವರ್ಣ ಸೌಧ ಸದ್ಬಳಕೆಗೆ ಯೋಜನೆ
ಉತ್ತರ ಕರ್ನಾಟಕದ ಜನರ ಆಸೆಯಂತೆ ಸುವರ್ಣಸೌಧದಲ್ಲಿ 360 ದಿನ ಆಡಳಿತ ಚಟುವಟಿಕೆ ನಡೆಸಿ ಮೈತ್ರಿ ಸರ್ಕಾರ ಹೊಸ ಬದಲಾವಣೆ ತರಲು ಚಿಂತನೆ ನಡೆಸುತ್ತಿದ್ದು, ಶೀಘ್ರ ಅನುಷ್ಠಾನಕ್ಕೆ ಬರಲಿದೆ ಎಂದು ಸಿಎಂ ಕುಮಾರಸ್ವಾಮಿ ತಿಳಿಸಿದರು. ನೆಹರು ನಗರದಲ್ಲಿ ಅಖಿಲ ಭಾರತ 70ನೇ ಕನ್ನಡ ಸಾಹಿತ್ಯ ಸಮ್ಮೇಳನದ ಸವಿನೆನಪಿಗಾಗಿ ನಿರ್ವಣಗೊಂಡಿರುವ ಕನ್ನಡ ಸಾಂಸ್ಕೃತಿಕ ಭವನವನ್ನು ಶನಿವಾರ ಉದ್ಘಾಟಿಸಿ ಮಾತನಾಡಿದರು. ಮಹದಾಯಿ ನೀರಾವರಿ ಯೋಜನೆ ಅನುಷ್ಠಾನಕ್ಕಾಗಿ ಹೋರಾಡುತ್ತಿರುವ ರೈತರ ಮೇಲೆ ದಾಖಲಾದ ಕೇಸ್ ವಾಪಸ್ ಪಡೆಯಲಾಗುವುದು. ಮಹದಾಯಿ ನೀರು ಸದ್ಬಳಕೆ ಇನ್ನಿತರ ವಿಷಯಗಳ ಕುರಿತು ಕಾನೂನು ಸಲಹೆಗಾರರು, ತಜ್ಞರು, ಅಧಿಕಾರಿಗಳ ಸಭೆ ನಡೆಸಿ, ತಜ್ಞರ ಸಮಿತಿ ರಚಿಸಲಾಗಿದೆ ಎಂದರು. ರಾಜ್ಯದಲ್ಲಿ ರಾಷ್ಟ್ರೀಕೃತ ಬ್ಯಾಂಕ್ ಅಧಿಕಾರಿಗಳು ಬೆಳೆಸಾಲ ಪಾವತಿಸುವಂತೆ ರೈತರಿಗೆ ನೋಟಿಸ್ ನೀಡಿದರೆ ತಕ್ಷಣ ಕ್ರಮ ಕೈಗೊಳ್ಳುತ್ತೇವೆ ಎಂದು ತಿಳಿಸಿದರು.
For the best experience use Awesummly app on your Android phone
Awesummly Chrome Extension Awesummly Android App