facebook pixel
chevron_right Top
transparent
ಕಾಂಗ್ರೆಸ್ ಹಿರಿಯರಿಂದ ಸಚಿವ ಸ್ಥಾನ ತ್ಯಾಗ?
ಸಚಿವ ಸಂಪುಟ ವಿಸ್ತರಣೆ ಕಾಲ ಸನ್ನಿಹಿತವಾಗಿರುವಾಗಲೇ ಕಾಂಗ್ರೆಸ್ ಪರಿಸ್ಥಿತಿ ಪ್ರೆಶರ್ ಕುಕ್ಕರ್​ನಂತಾಗಿದ್ದು, ಪಕ್ಷದ ಹಿರಿಯ ನಾಯಕರಿಗೆ ಮಂತ್ರಿ ಸ್ಥಾನ ಸಿಗುವುದು ಅನುಮಾನ ಎಂಬಂತಾಗಿದೆ. ತನ್ನ ಪಾಲಿಗಿರುವ ಆರು ಸ್ಥಾನಗಳ ಪೈಕಿ ಎಷ್ಟು ಸ್ಥಾನ ಈಗ ತುಂಬಿಕೊಳ್ಳಬೇಕು? ಯಾವ ಸಮುದಾಯಕ್ಕೆ ಆದ್ಯತೆ ಕೊಡಬೇಕು? ಎಂಥ ಸಮೀಕರಣದಿಂದ ಪಕ್ಷಕ್ಕೆ ಲಾಭವಾಗಲಿದೆ? ಎಂಬ ಲೆಕ್ಕಾಚಾರ ನಡೆದಿದ್ದು, ಸೋಮವಾರದ ಬಳಿಕ ಪಕ್ಷದ ಪ್ರಮುಖ ನಾಯಕರು ಒಂದು ತೀರ್ವನಕ್ಕೆ ಬರಲಿದ್ದಾರೆ. ಕಳೆದ ಸಮನ್ವಯ ಸಮಿತಿ ಸಭೆಯಲ್ಲಿ ಕೈಗೊಂಡ ತೀರ್ವನದಂತೆ ಸೆಪ್ಟೆಂಬರ್ ಕೊನೆಯೊಳಗೆ ಸಂಪುಟ ವಿಸ್ತರಣೆ ಮುಗಿಸಬೇಕು. ಈ ಬಗ್ಗೆ ಪಕ್ಷದ ನಾಯಕರಲ್ಲಿ ಸ್ಪಷ್ಟ ನಿಲುವು ಇಲ್ಲವಾದರೂ, ಸಚಿವಾಕಾಂಕ್ಷಿಗಳಲ್ಲಿ ಮಾತ್ರ ಪೈಪೋಟಿ ಕಂಡುಬಂದಿದೆ. ಜಾರಕಿಹೊಳಿ ಪ್ರಕರಣದಿಂದ ಈ ಹಿಂದೆ ತಯಾರಾಗಿದ್ದ ಪಟ್ಟಿಯೇ ಬದಲಾಗುವ ಸಾಧ್ಯತೆ ದಟ್ಟವಾಗಿದೆ.
For the best experience use Awesummly app on your Android phone
Awesummly Chrome Extension Awesummly Android App