facebook pixel
chevron_right Top
transparent
ಕೊಲೆ, ರೇಪ್​ನಲ್ಲಿ ಐವರಿಗೆ ಗಲ್ಲು
ಒಬ್ಬಾಕೆಯನ್ನು ಮೋಹಿಸಿ ಗಾರೆ ಕೆಲಸಗಾರ ಒಂದೂವರೆ ತಿಂಗಳ ಹಿಂದೆ ಕೊಲೆ ಮಾಡಿದ್ದ. ಇನ್ನೊಬ್ಬ ವಿದ್ಯಾರ್ಥಿನಿ ಮೇಲೆ ನಾಲ್ವರಿಂದ ಸಾಮೂಹಿಕ ಅತ್ಯಾಚಾರವಾಗಿತ್ತು. ಮಾಲೂರು ತಾಲೂಕಿನಲ್ಲಿಯೇ ನಡೆದಿದ್ದ ಈ ಎರಡೂ ಪ್ರಕರಣಗಳಲ್ಲಿ ಐವರಿಗೆ 2ನೇ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಗಲ್ಲು ಶಿಕ್ಷೆ ವಿಧಿಸಿ ಆದೇಶಿಸಿದೆ. ಜಿಲ್ಲೆಯ ಮಾಲೂರಿನಲ್ಲಿ ಆ.1ರಂದು ಶಾಲೆ ಮುಗಿಸಿಕೊಂಡು ಮನೆಗೆ ಹೋಗುತ್ತಿದ್ದ 15 ವರ್ಷದ ವಿದ್ಯಾರ್ಥಿನಿಯನ್ನು ಹತ್ಯೆಗೈದಿದ್ದ ಹಂತಕ ಹಾಗೂ 2014ರಲ್ಲಿ ಮಾಸ್ತಿ ಠಾಣೆಯ ವ್ಯಾಪ್ತಿ ಕುಪ್ಪೂರು ಗ್ರಾಮದಲ್ಲಿ ಬಾಲಕಿಯನ್ನು ಅಪಹರಿಸಿ ಸಾಮೂಹಿಕವಾಗಿ ಅತ್ಯಾಚಾರವೆಸಗಿದ್ದ ನಾಲ್ವರಿಗೆ 2ನೇ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ನ್ಯಾಯಾಧೀಶೆ ಬಿ.ಎಸ್.ರೇಖಾ ಶನಿವಾರ ಗಲ್ಲು ಶಿಕ್ಷೆ ವಿಧಿಸಿ ಆದೇಶಿಸುವ ಮೂಲಕ ಐತಿಹಾಸಿಕ ತೀರ್ಪು ನೀಡಿದ್ದಾರೆ. ವಿದ್ಯಾರ್ಥಿನಿ ಕೊಲೆ ಪ್ರಕರಣದಲ್ಲಿ ಗಲ್ಲು ಶಿಕ್ಷೆಗೆ ಗುರಿಯಾದ ಆರೋಪಿ ಮಾಲೂರು ತಾಲೂಕಿನ ಟೇಕಲ್​ನ ಟಿ.ಎಸ್.ಸತೀಶ್ ಬಾಬು (25).
For the best experience use Awesummly app on your Android phone
Awesummly Chrome Extension Awesummly Android App