facebook pixel
chevron_right Top
transparent
ಸಿದ್ದರಾಮಯ್ಯ ಅನಿವಾರ್ಯ ಮಾಸ್ಟರ್​ಪ್ಲ್ಯಾನ್
ರಾಜ್ಯ ರಾಜಕೀಯ ಮೇಲಾಟದಲ್ಲಿ ಪ್ರಯತ್ನಪಟ್ಟು ಸೋತಿದ್ದು ಬಿಜೆಪಿಯಾದರೆ, ಸರ್ಕಾರ ಉಳಿಸಿಕೊಂಡ ತೃಪ್ತಿ ಜೆಡಿಎಸ್​ನದ್ದು, ಆಂತರಿಕ ಬಿಕ್ಕಟ್ಟಿಗೆ ತೇಪೆ ಹಾಕಿಕೊಂಡು ನಿಟ್ಟುಸಿರುಬಿಟ್ಟಿದ್ದು ಕಾಂಗ್ರೆಸ್. ಇದರ ನಡುವೆ ಹೀರೋ ಆಗಿದ್ದು ಮತ್ತು ಇರುವಿಕೆಯ ಅನಿವಾರ್ಯತೆ ಸೃಷ್ಟಿಸಿಕೊಂಡಿದ್ದು ಮಾತ್ರ ಮಾಜಿ ಸಿಎಂ ಸಿದ್ದರಾಮಯ್ಯ. 2018ರ ವಿಧಾನಸಭೆ ಚುನಾವಣೆಯಲ್ಲಿ ಸ್ವಕ್ಷೇತ್ರದಲ್ಲಿ ಹೀನಾಯವಾಗಿ ಸೋತು, ಬಾದಾಮಿಯಲ್ಲಿ ಕೂದಲೆಳೆ ಅಂತರದಲ್ಲಿ ಗೆದ್ದು ಏದುಸಿರುಬಿಟ್ಟಿದ್ದ ಸಿದ್ದರಾಮಯ್ಯ ಈಗ ನಿಧಾನವಾಗಿ ಪಕ್ಷದ ಮೇಲೆ ಹಿಡಿತ ಸಾಧಿಸುತ್ತಿದ್ದಾರೆ. ಪಕ್ಷದಲ್ಲಿ ಅನಿವಾರ್ಯತೆ ಏನೆಂಬುದನ್ನು ಮತ್ತೆ ಮತ್ತೆ ಸಾಬೀತುಪಡಿಕೊಂಡೇ ಬರಲಾಂಭಿಸಿರುವುದಕ್ಕೆ ಅನೇಕ ನಿದರ್ಶನಗಳು ಕಾಣಿಸಲಾರಂಭಿಸಿವೆ. ಹೆಬ್ಬಾಳ್ಕರ್- ಜಾರಕಿಹೊಳಿ ಸಹೋದರರ ಜಟಾಪಟಿ ಪ್ರಕರಣಕ್ಕೂ ಸಿದ್ದರಾಮಯ್ಯ ನಂಟಿದೆ ಎಂಬುದು ಗುಟ್ಟಾಗಿ ಉಳಿದಿಲ್ಲ. ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಮಂತ್ರಿ ಸ್ಥಾನಕ್ಕೆ ಹತ್ತಿರವಾಗುತ್ತಿರುವ ವಿಚಾರ ಅರಗಿಸಿಕೊಳ್ಳಲಾಗದ ಜಾರಕಿಹೊಳಿ ಸಹೋದರರು ಅಸಮಾಧಾನ ಹೊರಹಾಕಲು ಸಮಯಕ್ಕಾಗಿ ಕಾಯುತ್ತಲೇ ಇದ್ದರು.
For the best experience use Awesummly app on your Android phone
Awesummly Chrome Extension Awesummly Android App