facebook pixel
chevron_right Top
transparent
ಎನ್​ಐಸಿ ಸಿಎಂಡಿಯಾಗಿ ತಜಿಂದರ್
ಕೇಂದ್ರ ಸರ್ಕಾರಿ ಸ್ವಾಮ್ಯದ ರಾಷ್ಟ್ರೀಯ ವಿಮಾ ಕಂಪನಿ ಲಿಮಿಟೆಡ್​ನ ಮುಖ್ಯ ವ್ಯವಸ್ಥಾಪಕ ನಿರ್ದೇಶಕರಾಗಿ ತಜಿಂದರ್ ಮುಖರ್ಜಿ ಸೆ.14ರಿಂದ ಅಧಿಕಾರ ವಹಿಸಿಕೊಂಡಿದ್ದಾರೆ. ದೆಹಲಿ ವಿಶ್ವವಿದ್ಯಾಲಯದಲ್ಲಿ ವಾಣಿಜ್ಯ ವಿಭಾಗದಲ್ಲಿ ಪದವಿ ಪಡೆದಿರುವ ತಜಿಂದರ್ ಮುಖರ್ಜಿ ಅವರು ಎನ್​ಐಸಿಗೆ ಬರುವ ಮುನ್ನ ನ್ಯೂ ಇಂಡಿಯಾ ಅಸ್ಯುರೆನ್ಸ್​ನಲ್ಲಿ ಪ್ರಧಾನ ವ್ಯವಸ್ಥಾಪಕ ಹುದ್ದೆ ನಿರ್ವಹಿಸುತ್ತಿದ್ದರು. 1983ರಲ್ಲಿ ನೇರ ನೇಮಕಾತಿ ಅಧಿಕಾರಿಯಾಗಿ ಯುನೈಟೆಡ್ ಇಂಡಿಯಾ ಇನ್ಸುರೆನ್ಸ್ ಕಂಪನಿಗೆ ಸೇರ್ಪಡೆಯಾಗಿದ್ದು, ವಿಮಾ ಉದ್ಯಮದಲ್ಲಿ 33 ವರ್ಷಗಳ ಸುಧೀರ್ಘ ಅನುಭವ ಹೊಂದಿದ್ದಾರೆ. 2012ರಲ್ಲಿ ಮುಂಬೈನ ನ್ಯೂ ಇಂಡಿಯಾ ಅಶ್ಯುರೆನ್ಸ್​ನ ಡೆಪ್ಯುಟಿ ಪ್ರಧಾನ ವ್ಯವಸ್ಥಾಪಕರಾಗಿ ಸೇರ್ಪಡೆಗೊಂಡು ನಂತರ ಪ್ರಧಾನ ವ್ಯವಸ್ಥಾಪಕರಾಗಿ ಬಡ್ತಿ ಹೊಂದಿದ್ದರು. ಟೆಕ್ನೋ ಮಾರ್ಕೆಟಿಂಗ್ ಸೇರಿ ಹಲವು ವಿಭಾಗಗಳ ಮುಖ್ಯಸ್ಥರಾಗಿ ಕಾರ್ಯನಿರ್ವಹಿಸಿದ್ದಾರೆ.
For the best experience use Awesummly app on your Android phone
Awesummly Chrome Extension Awesummly Android App