facebook pixel
chevron_right Sports
transparent
ಬಾಂಗ್ಲಾದೇಶಕ್ಕೆ ಭರ್ಜರಿ ಗೆಲುವು
ಬಾಂಗ್ಲಾದೇಶ ತಂಡದ ಚೇತೋಹಾರಿ ನಿರ್ವಹಣೆಯ ಮುಂದೆ ಎಲ್ಲ ವಿಭಾಗಗಳಲ್ಲೂ ಹಿನ್ನಡೆ ಅನುಭವಿಸಿದ ಐದು ಬಾರಿಯ ಚಾಂಪಿಯನ್ ಶ್ರೀಲಂಕಾ ತಂಡ 14ನೇ ಆವೃತ್ತಿಯ ಏಷ್ಯಾಕಪ್ ಟೂರ್ನಿಯ ಮೊದಲ ಪಂದ್ಯದಲ್ಲಿಯೇ ದೊಡ್ಡ ಅಂತರದ ಸೋಲು ಕಂಡಿದೆ. ವಿಕೆಟ್ಕೀಪರ್ ಬ್ಯಾಟ್ಸ್​ಮನ್ ಮುಶ್ಪೀಕರ್ ರಹೀಂ (144ರನ್, 150 ಎಸೆತ, 11 ಬೌಂಡರಿ, 4 ಸಿಕ್ಸರ್) ಸಾಹಸಿಕ ಶತಕ ಹಾಗೂ ಸಂಘಟಿತ ಬೌಲಿಂಗ್​ನ ನೆರವಿನಿಂದ ಬಾಂಗ್ಲಾದೇಶ, ಶ್ರೀಲಂಕಾವನ್ನು 138 ರನ್​ಗಳಿಂದ ಬಗ್ಗುಬಡಿಯುವಲ್ಲಿ ಯಶ ಕಂಡಿತು. ದುಬೈ ಅಂತಾರಾಷ್ಟ್ರೀಯ ಸ್ಟೇಡಿಯಂನಲ್ಲಿ ಶನಿವಾರ ಅರಂಭಗೊಂಡ ಟೂರ್ನಿಯಲ್ಲಿ ಟಾಸ್ ಗೆದ್ದ ಬಾಂಗ್ಲಾದೇಶ ಮೊದಲು ಬ್ಯಾಟಿಂಗ್ ಆಯ್ದುಕೊಂಡಿತು. ಮೊದಲ ಓವರ್​ನಲ್ಲಿಯೇ ಲಿಟನ್ ದಾಸ್ ಹಾಗೂ ಸ್ಟಾರ್ ಆಟಗಾರ ಶಕೀಬ್ ವಿಕೆಟ್ ಕಳೆದುಕೊಂಡಿದ್ದಲ್ಲದೆ, ಮರು ಓವರ್​ನಲ್ಲಿ ತಮೀಮ್ ಇಕ್ಬಾಲ್​ರನ್ನು ಗಾಯದ ಕಾರಣದಿಂದಾಗಿ ಕಳೆದುಕೊಂಡಿತ್ತು.
For the best experience use Awesummly app on your Android phone
Awesummly Chrome Extension Awesummly Android App